ಪಾರ್ವತಿದೇವಿ ರಥೋತ್ಸವದಲ್ಲಿ ಮಹಿಳೆಯರು ರಥ ಎಳೆಯುವ ಮೂಲಕ ಎಲ್ಲಾ ಕ್ಷೇತ್ರಗಳಲ್ಲೂ ಸೈ.

ಹಾವೇರಿ: ಇಂದು ಮಹಿಳೆ ಆರ್ಥಿಕತೆಯ ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನ ಸಾಧನೆ ತೋರುತ್ತಿದ್ದಾಳೆ. ಪುರುಷರಿಗೇ ಮೀಸಲಾಗಿರುವ ಕ್ಷೇತ್ರಗಳಲ್ಲೂ ಹೆಣ್ಣುಮಕ್ಕಳು ಸೈ ಎನಿಸಿಕೊಂಡಿದ್ದಾರೆ.
ಇದಕ್ಕೊಂದು ಹೊಸ ನಿದರ್ಶನ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಂತ್ರೋಡಿ ಕ್ಷೇತ್ರ.ಶತಮಾನದ ಹಿಂದೆ ಪುರುಷರಿಗೆ ನೀಡಿದಷ್ಟೇ ಪ್ರಾಧಾನ್ಯತೆಯನ್ನು ಮಹಿಳೆಯರಿಗೆ ಅಂದಿನ ರೇವಣಸಿದ್ದೇಶ್ವರ ಶ್ರೀಗಳು ನೀಡಿದ್ದಾರೆ. ಮಠದಲ್ಲಿ ಪ್ರತೀವರ್ಷ ಅಮವಾಸ್ಯೆ ದಿನ ಶಿವನ ರಥೋತ್ಸವ ನಡೆದರೆ ಮರುದಿನ ಪಾರ್ವತಿಯ ರಥೋತ್ಸವ ನಡೆಯುತ್ತದೆ.
ಮೊದಲ ದಿನ ನಡೆಯುವ ರೇವಣಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪಿಸಿ ರಥೋತ್ಸವದಲ್ಲಿ ಪುರುಷರು ರಥ ಎಳೆದು ಸಂಭ್ರಮಿಸುತ್ತಾರೆ. ಮರುದಿನ ನಡೆಯುವ ಪಾರ್ವತಿದೇವಿ ರಥೋತ್ಸವದಲ್ಲಿ ಮಹಿಳೆಯರು ಮಾತ್ರ ರಥ ಎಳೆಯುತ್ತಾರೆ.
ಕೆಂಜಡೇಶ್ವರ ಮಠದಿಂದ ಪಾದಗಟ್ಟೆಯವರಿಗೆ ಮತ್ತು ಪಾದಗಟ್ಟಿಯಿಂದ ಮಠದವರೆಗೆ ಸುಮಾರು 800 ಮೀಟರ್ ದೂರದಷ್ಟು ಮಹಿಳೆಯರೇ ರಥ ಎಳೆದು ಸಂಭ್ರಮಿಸುತ್ತಾರೆ. ಅದು ಪಾದಗಟ್ಟಿಯಿಂದ ಮಠಕ್ಕೆ ಹೋಗುವ ದಾರಿ ಬೆಟ್ಟದ ಮೇಲಿದ್ದರೂ ಸಹ ಮಹಿಳೆಯರೇ ರಥ ಎಳೆಯುತ್ತಾರೆ.