ಕೊಪ್ಪಳ

ಈ ಜನ್ಮದಲ್ಲಲ್ಲ… ಮುಂದಿನ ಜನ್ಮದಲ್ಲೂ ಕಾಂಗ್ರೆಸ್’ಗೆ ಮಾತ್ರ ಹೋಗಲ್ಲ: ಯತ್ನಾಳ

 ಕೊಪ್ಪಳ: ಬಿ.ಎಸ್.ವೈ ಮತ್ತು ವಿಜಯೇಂದ್ರಗೆ ನಾಚಿಕೆ ಮಾನ ಮರ್ಯಾದೆ ಇದೇಯಾ?- ಯತ್ನಾಳ ಈ ಜನ್ಮದಲ್ಲಲ್ಲ ಮುಂದಿನ ಜನ್ಮದಲ್ಲೂ ಕಾಂಗ್ರೆಸ್’ಗೆ ಮಾತ್ರ ಹೋಗಲ್ಲ. ಸುಳ್ಳು ಸುದ್ಧಿ ಹಬ್ಬಿಸುವವರಿಗೆ ನಾಚಿಕೆ ಮಾನ ಮರ್ಯಾದೆ ಇದೇಯಾ ಎನ್ನುವ ಮೂಲಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದು ಮತ್ತೇ ಬಿ.ಎಸ್.ವೈ ಮತ್ತು ವಿಜಯೇಂದ್ರ ವಿರುದ್ಧ ಮತ್ತೇ ಕಿಡಿಕಾರಿದ್ದಾರೆ.

ಅವರು ಇಂದು ಕೊಪ್ಪಳದಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ಸಿಗೆ ಈ ಜನ್ಮದಲ್ಲೂ ಹೋಗಲ್ಲ. ಮುಂದಿನ ಜನ್ಮದಲ್ಲೂ ಹೋಗಲ್ಲ. ಕಾಂಗ್ರೆಸ್ ಮುಸ್ಲಿಂಮರ ಪಕ್ಷ. ಹಿಂದೂಗಳ ಪಕ್ಷವಲ್ಲ. ವಿಜಯೇಂದ್ರನ ಟೀಂನ ನಕಲಿ ಸಾಮಾಜಿಕ ಜಾಲತಾಣವಿದ್ದು, ನಕಲಿ ಸುದ್ಧಿಗಳನ್ನು ಪಸರಿಸುವುದೇ ಅವರ ಕೆಲಸ. ವಿಜಯೇಂದ್ರ ಅವರಿಗೆ ಹಲವಾರು ಮಾಧ್ಯಮಗಳು ಬೆಂಬಲಿಸುತ್ತವೆ. ರೈತರ ಹೆಸರಿನಲ್ಲಿ, ವೀರಶೈವ ಲಿಂಗಾಯಿತರ ಹೆಸರಿನಲ್ಲಿ ಮತ್ತು ಕೊರೋನಾ ಕಾಲದಲ್ಲಿ ಯಡಿಯೂರಪ್ಪ ಮತ್ತು ಅವರ ವಿಜಯೇಂದ್ರ ಅವರು ಹತ್ತಾರು ಸಾವಿರ ಲಕ್ಷ ರೂಪಾಯಿ ಕರ್ನಾಟಕದಿಂದ ಲೂಟಿ ಮಾಡಿದ್ದಾರೆ. ಇವರಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದರು.

ಇನ್ನು ಒಬ್ಬ ಭ್ರಷ್ಟ ಸಿಎಂ ಆಗಿ, ಜೈಲಿಗೆ ಹೋದ ವ್ಯಕ್ತಿ. ಮತ್ತು ಅಪ್ಪನ ನಕಲಿ ಮಾಡುವ ಮಗ. ಇಂತಹ ಭ್ರಷ್ಟ ಕುಟುಂಬಕ್ಕೆ ನನ್ನನ್ನು ಉಚ್ಛಾಟನೆ ಮಾಡಿ ಹಸಿರು ನಿಶಾನೆ ನೀಡಿದೆಯಾ ಎಂದು ಹೈಕಮಾಂಡ್ ಅವರನ್ನು ಪ್ರಶ್ನಿಸಿದ ಯತ್ನಾಳ. ಕರ್ನಾಟಕ ಬಿಜೆಪಿ ಯಡಿಯೂರಪ್ಪನವರ ಕುಟುಂಬಕ್ಕೆ ಮಾರಿಕೊಂಡು ಬಿಟ್ಟಿದೇಯಾ ಎಂಬ ಪ್ರಶ್ನೆ ರಾಜ್ಯದ ಜನರಲ್ಲಿ ಮೂಡಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button