Uncategorized

ಶೇಡಬಾಳ ಪಟ್ಟಣದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹಣ ವಿತರಣೆ.

ಶೇಡಬಾಳ ಪಟ್ಟಣ ಪಂಚಾಯಿತಿಯಲ್ಲಿ ೨೦೨೧-೨೨ ಮತ್ತು ೨೦೨೨-೨೩ ಸಾಲಿನಲ್ಲಿ ಐದು ಅಂಗವಿಕಲರಿಗೆ ತ್ರೀಚಕ್ರವಾಹಣಗಳನ್ನು ವಿತರಿಸುವ ಕಾರ್ಯಕ್ರಮ ಕಾಗವಾಡ ಶಾಸಕ ರಾಜು ಕಾಗೆಯವರ ಹಸ್ತೆಯಿಂದ ನೆರವೇರಿತು.

ಶನಿವಾರ ಬೆಳಗ್ಗೆ ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಉತ್ಕರ್ಶ ಪಾಟೀಲ ಇವರ ಅಧ್ಯಕ್ಷತೆಯಲ್ಲಿ ತ್ರೀಚಕ್ರವಾಹಣ ವಿತರಿಸುವ ಕಾರ್ಯಕ್ರಮ ನೆರವೇರಿತು. ಫಲಾನುಭವಿಗಳಾದ ಸೊಬಣ್ಣ ಹೊನಕಾಂಬಳೆ, ಸನ್ಮತಿ ಪಾಟೀಲ, ಸುನಿತಾ ನಾಂದ್ರೆ, ವಿರುಪಾಕ್ಷ ಮಾಳಿ, ಈರಣ್ಣ ಅಡಹಳ್ಳಿ ಇವರಿಗೆ ಶಾಸಕರ ಹಸ್ತೆಯಿಂದ ತ್ರೀಚಕ್ರವಾಹಣ ವಿತರಿಸಲಾಯಿತು.

ಶಾಸಕ ರಾಜು ಕಾಗೆ ಅವರು ತ್ರೀಚಕ್ರವಾಹಣ ಪಡೆಯುವ ಅಂಗವಿಕಲರಿಗೆ ಕೆಲವು ಸೂಚನೆಗಳನ್ನು ನೀಡುವಾಗ, ನೀವು ಈ ವಾಹನವನ್ನು ನಿಮ್ಮ ಜೀವನದಲ್ಲಿ ಸದುಪಯೋಗಪಡಿಸಿಕೊಳ್ಳಿ. ಇದನ್ನು ಬೇರೆಯವರಿಗೆ ಕೊಡಬೇಡಿಯೆಂದರು.

ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಸುರೇಶ ಪತ್ತಾರ ಸ್ವಾಗತಿಸಿದರು. ಅಭಿಯಂತರಾದ ಗುರುಪ್ರಸಾದ ಹಿರೇಮಠ ಫಲಾನುಭವಿಗಳ ಹೆಸರು ಘೋಷಣೆ ಮಾಡಿದರು. ವೆಂಕಟೇಶ ಚಲವಾದಿ ವಂದಿಸಿದರು. ಪಟ್ಟಣ ಪಂಚಾಯತಿಯ ಅಧ್ಯಕ್ಷ ಉತ್ಕರ್ಶ ಪಾಟೀಲ, ಉಪಾಧ್ಯಕ್ಷ ದೀಪಾ ನಾಮದೇವ ಹೊನಕಾಂಬಳೆ, ಮತ್ತು ಎಲ್ಲ ಸದಸ್ಯರು, ಸನ್ಮತಿ ಶಿಕ್ಷಣ ಸಮೀತಿಯ ಅಧ್ಯಕ್ಷ ವಿನೋದ ಬರಗಾಲೆ, ವೃಷಭ ಚೌಗುಲೆ, ಅಣ್ಣಾ ಅರವಾಡೆ, ಪ್ರಕಾಶ ಮಾಳಿ, ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

 

Related Articles

Leave a Reply

Your email address will not be published. Required fields are marked *

Back to top button