ಬೆಳಗಾವಿರಾಜ್ಯ

ಕ್ರಾಂತಿ ಮಹಿಳಾ ಮಂಡಳದಿಂದ ವಿಶ್ವ ಪರಿಸರ ದಿನಾಚರಣೆ

ಬೆಳಗಾವಿ: ನಗರದ ಹಿಂದವಾಡಿ ಕ್ರಾಂತಿ ಮಹಿಳಾ ಮಂಡಳ ವತಿಯಿಂದ ವಿಶ್ವ ಪರಿಸರ ದಿನಾಚರಣೆ ನಿಮಿತ್ತವಾಗಿ ಮಹಾರಾಷ್ಟ್ರದ ಅಂಬೋಳಿಯಲ್ಲಿರುವ ಏಮ್ ಫಾರ ಸೇವಾ ಸಂಸ್ಥೆಯ ಆಶ್ರಮದಲ್ಲಿ ೨೦ ಮಾವಿನ ಸಸಿಗಳನ್ನು ನೇಡುವ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ವೇಳೆ ನಿವೃತ್ತ ಜಿಸ್‌ಎಸ್‌ಟಿ ಅಸಿಸ್ಟೆಂಟ್ ಕಮಿಷನರ್ ಲಕ್ಷ್ಮಣ ಕಾಂಬಳೆ ಅವರು ಮಾತನಾಡಿ, ಕ್ರಾಂತಿ ಮಹಿಳಾ ಮಂಡಳ ಸಮಾಜಪರ ಕ್ರಾಂತಿಕಾರಿಯಾದ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಸದಸ್ಯರೆಲ್ಲಾ ಗೃಹಣಿಯರಾಗಿದ್ದು ತಮ್ಮ ಕುಟುಂಬದ ಜವಾಬ್ದಾರಿಗಳ ಜೊತೆಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಪರಿಸರದ ಮುಖ್ಯ ಭಾಗಗಳಾಗಿರುವ ನೀರು, ಗಾಳಿ, ಬೆಟ್ಟ, ಗುಡ್ಡ ಸೇರಿದಂತೆ ವನ್ಯಜೀವಿ ಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನಮ್ಮ ನಾಡು ಸಂಪದ್ಭರಿತವಾಗಬೇಕಾದರೆ ಪ್ರತಿಯೊಬ್ಬರು ಮನೆಗೊಂಡು ಸಸಿ ನೇಡಬೇಕು. ಊರಿಗೊಂದು ವನವಾಗಬೇಕು. ಅಂದಾಗ ಮಳೆ, ಬೆಳೆ ಚೆನ್ನಾಗಿ ಬರಲು ಸಾಧ್ಯ. ನಮ್ಮ ಮುಂದಿನ ಯುವ ಪೀಳಿಗೆ ಉತ್ತಮ ಗಾಳಿ ಸೇವಿಸಬೇಕಾದರೆ ಆದಷ್ಟೂ ಮರಳಗಳನ್ನು ಬೆಳೆಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಪ್ರೇಮಾ ಉಪಾಧ್ಯೆ ಪರಿಸರ ರಕ್ಷಣೆ ಕುರಿತಾದ ಒಂದು ಸುಂದರ ನೃತ್ಯವನ್ನು ಪ್ರಸ್ತುತಪಡಿಸಿದರು. ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯ ಡಾ. ಆರ್.ಸಿ.ಮಠದ , ಹಾಗೂ ನಿವೃತ್ತ ಪ್ರಾಧ್ಯಾಪಕ ಡಾ. ಕೆ.ಎಸ್. ಗುಡಗನಟ್ಟಿ ಅವರು ಆಗಮಿಸಿದ್ದರು
.
ಕ್ರಾಂತಿ ಮಹಿಳಾ ಮಂಡಳದ ಅಧ್ಯಕ್ಷರಾದ ಮಂಗಲಾ ಮಠದ ಸ್ವಾಗತಿಸಿದರು. ಶೋಭಾ ಕಾಡನ್ನವರ ಹಾಗೂ ರೇಣುಕಾ ಕಾಂಬಳೆ ಸ್ವಾಗತ ಗೀತೆಯನ್ನು ಪ್ರಸ್ತುತಪಡಿಸಿದರು. ಹೇಮಾ ಬರಬರಿ ಅಥಿತಿಗಳನ್ನು ಪರಿಚಯಿಸಿದರು. ಭಾರತಿ ರತ್ನಪ್ಪಗೊಳ ಕ್ರಾಂತಿ ಮಹಿಳಾ ಮಂಡಳದ ಧೈಯೋದ್ದೇಶಗಳನ್ನು ಪರಿಚಯಿಸಿದರು. ರತ್ನಶ್ರೀ ಗುಡೇರ ನಿರೂಪಿಸಿದರು. ಆಶಾ ನಿಲಜಗಿ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button