ಮಾಡಿದ ಕಾರ್ಯ ಮತ್ತು ಗಳಿಸಿದ ಕೀರ್ತಿ ಮಾತ್ರ ಮನುಷ್ಯನಿಗೆ ಶಾಶ್ವತ; ಸಿ.ಎಂ. ತ್ಯಾಗರಾಜ್

ಬೆಳಗಾವಿ: ತತ್ವಜ್ಞಾನಿಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಗುರುದೇವ ರಾನಡೆ ಅವರ ಜೀವನ, ಕಾರ್ಯ ಮತ್ತು ಫಿಲಾಸಫಿಯ ಬಗ್ಗೆ ಚಿಂತನೆ ಮನುಷ್ಯನಿಗೆ ಯಾವುದು ಶಾಶ್ವತವಲ್ಲ ತತ್ವಜ್ಞಾನಿಗಳ ಸಂದೇಶದ ಸಾರವನ್ನು ತಿಳಿದುಕೊಳ್ಳಬೇಕು; ಸಿ.ಎಂ. ತ್ಯಾಗರಾಜ್
ಮನುಷ್ಯನಿಗೆ ಯಾವುದು ಶಾಶ್ವತವಲ್ಲ. ಮನುಷ್ಯನಿಗೆ ತಾನು ಮಾಡಿದ ಕಾರ್ಯ ಮತ್ತು ಕೀರ್ತಿ ಮಾತ್ರ ಶಾಶ್ವತ. ತತ್ವಜ್ಞಾನಿಗಳ ಸಂದೇಶದ ಸಾರವನ್ನು ತಿಳಿದುಕೊಂಡು ಮನುಷ್ಯ ತಾನ್ಯಾರು ಎಂಬುದನ್ನು ಅರಿಯಬೇಕೆಂದು ಮುಖ್ಯ ಅತಿಥಿಗಳಾಗಿ ಬೆಳಗಾವಿ ಆರ್.ಸಿ.ಯುನ ಉಪಕುಲಪತಿಗಳಾದ ಸಿ.ಎಂ. ತ್ಯಾಗರಾಜ್ ಹೇಳಿದರು.
ಬೆಳಗಾವಿಯ ಅಕಾಡೆಮಿ ಆಫ್ ಕಂಪ್ಯಾರೇಟ್ಹಿವ್ ಫಿಲಾಸಫಿ ಆಂಡ್ ರಿಲಿಜನ್ ಮತ್ತು ನವದೆಹಲಿಯ ದಿ ಇಂಡಿಯನ್ ಕೌನ್ಸಿಲ್ ಆಫ್ ಫಿಲಾಸಾಪಿಕಲ್ ರಿಸರ್ಚನ ಸಂಯುಕ್ತಾಶ್ರಯದಲ್ಲಿ ಗುರುದೇವ ಡಾ. ಆರ್.ಡಿ. ರಾನಡೆ ಅವರ ಜೀವನ, ಕಾರ್ಯ ಮತ್ತು ಫಿಲಾಸಫಿಗೆ ಸಂಬಂಧಿಸಿದಂತೆ ಬೆಳಗಾವಿಯ ಹಿಂದವಾಡಿಯಲ್ಲಿರುವ ಕೆ.ಎಲ್.ಎಸ್. ಕೆ.ಕೆ. ವೇಣುಗೋಪಾಲ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣಕ್ಕೆ ಇಂದಿನಿಂದ ಚಾಲನೆ ದೊರೆಯಿತು.
ಮುಖ್ಯ ಅತಿಥಿಗಳಾಗಿ ಬೆಳಗಾವಿ ಆರ್.ಸಿ.ಯುನ ಉಪಕುಲಪತಿಗಳಾದ ಸಿ.ಎಂ. ತ್ಯಾಗರಾಜ್ ಉಪಸ್ಥಿತರಿದ್ಧರು. ದೆಹಲಿ ವಿಶ್ವವಿದ್ಯಾಲಯದ ವಿಭಾಗ ಪ್ರಮುಖರಾದ ಡಾ. ಬಾಲಗಣಪತಿ ದೇವರಕೊಂಡ ಅವರು ಮಾರ್ಗದರ್ಶಕರಾಗಿ ಉಪಸ್ಥಿತರಿದ್ಧರು. ಎಸಿಪಿಆರ್ ಚೇರಮನ್ ಅಶೋಕ ಪೋತದಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ನೇತೃತ್ವವನ್ನು ಗೌರವ ಕಾರ್ಯದರ್ಶಿಗಳಾದ ಎಂ.ಬಿ. ಜೀರಲಿ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳಗಾವಿ ಆರ್.ಸಿ.ಯುನ ಉಪಕುಲಪತಿಗಳಾದ ಸಿ.ಎಂ. ತ್ಯಾಗರಾಜ್ ಅವರು ಮನುಷ್ಯನಿಗೆ ಯಾವುದು ಶಾಶ್ವತವಲ್ಲ. ಕಾಯಕ ಮತ್ತು ಕೀರ್ತಿ ಮಾತ್ರ ಮನುಷ್ಯನಿಗೆ ಶಾಶ್ವತ. ಮನುಷ್ಯ ಮೊದಲೂ ತಾನೂ ಯಾರು ಎಂಬುದನ್ನು ಅರಿಯಬೇಕು. ಮನುಷ್ಯ ತನ್ನ ಜೀವನದ್ದುದ್ದಕ್ಕೂ ಕೇವಲ ಅಗಾಧವಾದ ಸಂಪತ್ತನ್ನು ಗಳಿಸಲು ಪ್ರಯತ್ನ ಪಡುತ್ತಿರುತ್ತಾನೆ. ಆದರೇ ಚಿಂತನೆ, ಧ್ಯಾನ ಸಾಧನೆಗಳು ನೆಮ್ಮದಿಯನ್ನು ನೀಡುತ್ತವೆ. ಭಾರತ ಸೇರಿದಂತೆ ದೇಶ ವಿದೇಶದ ಹಲವಾರು ತತ್ವಜ್ಞಾನಿಗಳು ಸಂದೇಶವನ್ನು ನೀಡಿದ್ದಾರೆ. ಅವುಗಳನ್ನು ಅರಿಯಬೇಕು. ಆತ್ಮದ ಬೆಳಕಿನಲ್ಲಿ ನಡೆಯಬೇಕು ಎಂದರು.
ದೆಹಲಿ ವಿಶ್ವವಿದ್ಯಾಲಯದ ವಿಭಾಗ ಪ್ರಮುಖರಾದ ಡಾ. ಬಾಲಗಣಪತಿ ದೇವರಕೊಂಡ ಅವರು ಮಾರ್ಗದರ್ಶನ ನೀಡಿದರು. ಸತತವಾಗಿ ಧ್ಯಾನಧಾರಣೆಯಿಂದ ಧ್ಯಾನ ಸಿದ್ಧಿಯೂ ಲಭಿಸುತ್ತದೆ. ನಿರಂತರವಾಗಿ ಧ್ಯಾನಧಾರಣೆಯೂ ಬಹಳಷ್ಟು ಅವಶ್ಯಕತವಾಗಿದೆ. ಈಗೀನ ಯುವಪೀಳಿಗೆಗೆ ಧಾನ್ಯಧಾರಣೆ ಮತ್ತು ಗುರುಗಳ ಮಾರ್ಗದರ್ಶನ ಅತ್ಯಾವಶ್ಯಕವಾಗಿದೆ ಎಂದರು.