Uncategorized
ವಿಚ್ಛೇದಿತ ಮಹಿಳೆ ಮದುವೆಗೆ ಒಪ್ಪಿಲ್ಲ ಎಂದು ಚಾಕು ಇರಿದು ಕೊ*ಂದ ಆರೋಪಿ ಆತ್ಮಹತ್ಯೆ
ವಿಚ್ಛೇದಿತ ಮಹಿಳೆ ಮದುವೆಗೆ ಒಪ್ಪಿಲ್ಲ ಎಂದು ಚಾಕು ಇರಿದು ಕೊ*ಂದ ಆರೋಪಿ ಆತ್ಮಹತ್ಯೆ

ವಿಚ್ಛೇದಿತ ಮಹಿಳೆ ಮದುವೆಗೆ ಒಪ್ಪಿಲ್ಲ ಎಂದು ಚಾಕು ಇರಿದು ಕೊ*ಂದ ಆರೋಪಿ ಆತ್ಮಹತ್ಯೆ
ವಿಚ್ಛೇದಿತ ಹಿಂದೂ ಮಹಿಳೆಯ ಹಿಂದೆ ಬಿದ್ದು ಮದುವೆಯಾಗುವಂತೆ ಪೀಡಿಸುತ್ತಿದ್ದ ಮುಸ್ಲಿಂ ಯುವಕ ಆಕೆ ಮದುವೆಗೆ ಒಪ್ಪಿಲ್ಲ ಎಂದು ಚಾಕು ಇರಿದು ಕೊಲೆಗೈದು ಪರಾರಿಯಾಗಿದ್ದ. ಈಗ ಆರೋಪಿ ಯುವಕ ಆತ್ಮ*ಹ*ತ್ಯೆಗೆ ಶರಣಾಗಿದ್ದಾನೆ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಈ ಘಟನೆ ನಡೆದಿದೆ. ಯಲ್ಲಾಪುರ ನಿವಾಸಿ ರಂಜಿತಾ (30) ಕೊ*ಲೆಯಾದ ಮಹಿಳೆ. ಮುಸ್ಲಿಂ ಯುವಕ ರಫೀಕ್ ಮಹಿಳೆ ಮದುವೆಗೆ ಒಪ್ಪಿಲ ಎಂದು ಚಾಕುವಿನಿಂದ ಇರಿದು ನಡುರಸ್ತೆಯಲ್ಲಿಯೇ ನಿನ್ನೆ ಕೊಲೆ*ಗೈದು ಪರಾರಿಯಾಗಿದ್ದ.
ಕೊಲೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ರಫೀಕ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಇಂದು ಶ್ವಾನದಳದೊಂದಿಗೆ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಆರೋಪಿ ರಫೀಕ್ ಶವ ಪತ್ತೆಯಾಗಿದೆ.
ಯಲ್ಲಾಪುರದ ಕಾಳಮ್ಮನಗರದ ನಿವಾಸದಲ್ಲಿ ರಫೀಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.