ಕುಂಭಮೇಳದಲ್ಲಿ ಸಾವನ್ನಪ್ಪಿದ್ದವರ ಶವಗಳನ್ನು ಉಚಿತವಾಗಿ ಬೆಳಗಾವಿಗೆ ತರಿಸಲು ವ್ಯವಸ್ಥೆ; ಅಭಯ್ ಪಾಟೀಲ್

ಬೆಳಗಾವಿ: ಕುಂಭಮೇಳಕ್ಕೆ ಹೊರಟು ದುರ್ಘಟನೆಗೀಡಾಗಿ ಸಾವನ್ನಪ್ಪಿದ್ದವರ ಶವಗಳನ್ನು ಮಧ್ಯಪ್ರದೇಶದ ಇಂದೋರಿನಿಂದ ಉಚಿತವಾಗಿ ಬೆಳಗಾವಿಗೆ ತರಿಸಲು ವ್ಯವಸ್ಥೆಯನ್ನು ಮಾಡಲಾಗಿದೆ. ಯಾವುದೇ ಶುಲ್ಕವನ್ನು ಆಕರಿಸುವುದಿಲ್ಲ. ನಾಳೆ ಭಾನುವಾರ ಶವಗಳನ್ನು ಬೆಳಗಾವಿಗೆ ತರಲಾಗುವುದು ಎಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಹೇಳಿದರು.
ಅವರು ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕುಂಭಮೇಳಕ್ಕೆ ಹೊರಟು ದುರ್ಘಟನೆಗೀಡಾಗಿ ಸಾ*ವನ್ನಪ್ಪಿದ್ದವರ ಶವಗಳನ್ನು ಮಧ್ಯಪ್ರದೇಶದ ಇಂದೋರಿನಿಂದ ಬೆಳಗಾವಿಗೆ ತರಲು ಕ್ರಮಕೈಗೊಳ್ಳಲಾಗುತ್ತಿದೆ. ಇಂದು ಮಧ್ಯಾನ್ಹ ಮರಣೋತ್ತರ ಪರೀಕ್ಷೆ ನಡೆಸಿ, ಮೃತರನ್ನು ಗುರುತಿಸಲಾಗುವುದು. ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದ್ದು, ಯಾವುದೇ ಪ್ರಕಾರದ ಶುಲ್ಕಗಳನ್ನು ಆಕರಿಸುವುದಿಲ್ಲ . ಮಧ್ಯಪ್ರದೇಶದ ಸರ್ಕಾರವೇ ಎಲ್ಲ ಖರ್ಚುವೆಚ್ಚವನ್ನು ನೋಡಿಕೊಳ್ಳಲಿದೆ. ಯಾರಿಗೂ ಹಣ ನೀಡುವ ಅವಶ್ಯಕತೆಯಿಲ್ಲ. ನಾಳೆ ಭಾನುವಾರ ಮೃತರ ಪಾರ್ಥಿವ ಶರೀರರಗಳು ಬೆಳಗಾವಿಗೆ ಆಗಮಿಸಲಿವೆ ಎಂದು ತಿಳಿಸಿದರು.