ಬೆಳಗಾವಿ
ಪ್ರತಿವರ್ಷದಂತೆ ಈ ಬಾರಿಯೂ ಐಸ್ ಕ್ರೀಂ ಉತ್ಸವ ;ಅಭಯ ಪಾಟೀಲ್

ಬೆಳಗಾವಿ: ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಅವರ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಐಸ್ ಕ್ರೀಂ ಉತ್ಸವವನ್ನು ಆಯೋಜಿಸಲಾಗಿತ್ತು. ನಗರದ ಕ್ಯಾಂಪ್ ಬಿ.ಕೆ. ಮಾಡೆಲ್ ಶಾಲೆಯ ಮಕ್ಕಳಿಗೆ ಉಚಿತವಾಗಿ ಐಸ್ ಕ್ರೀಂಗಳನ್ನು ವಿತರಿಸಲಾಯಿತು.
ಈ ಕುರಿತು ಮಾಹಿತಿ ನೀಡಿದ ಶಾಸಕ ಅಭಯ ಪಾಟೀಲ ಅವರು ಕಳೆದ 4 ವರ್ಷಗಳಿಂದ ಪ್ರತಿ ಬಾರಿಯೂ ಐಸ್ ಕ್ರೀಮ್ ಉತ್ಸವವನ್ನು ಮಾಡಲಾಗುತ್ತಿದೆ. ಇಂದು 5ನೇ ವರ್ಷದ ಉತ್ಸವವನ್ನು ಆಯೋಜಿಸಲಾಗಿದೆ ಸುಮಾರು 80 ಸಾವಿರ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಸ್ ಕ್ರೀಮ್ ವಿತರಿಸಲಾಗುತ್ತಿದೆ ಎಂದು ಐಸ್ ಕ್ರೀಂ ಉತ್ಸವದ ಕುರಿತು ಮಾಹಿತಿಯನ್ನು ನೀಡಿದರು.ಈ ವೇಳೆ ನೂರಾರು ವಿದ್ಯಾರ್ಥಿಗಳು ಐಸ್ ಕ್ರೀಂ ಉತ್ಸವದ ಸದುಪಯೋಗವನ್ನು ಪಡೆದುಕೊಂಡರು.