ಕಾಗವಾಡ
ಖಿಳೆಗಾಂವ ಬಸವೇಶ್ವರ ಏತ ನೀರಾವರಿಗೆ ಪ್ರಾಯೋಗಿಕ ಚಾಲನೆ.

ಕಾಗವಾಡ : ಖಿಳೆಗಾಂವ ಬಸವೇಶ್ವರ ಏತ ನೀರಾವರಿಗೆ ಪ್ರಾಯೋಗಿಕ ಚಾಲನೆ ನೀಡಿರುವ ಹಿನ್ನಲೆಯಲ್ಲಿ ಕಾಗವಾಡ ಮತಕ್ಷೇತ್ರದ ಅರಳಿಹಟ್ಟಿ ಗ್ರಾಮದ ತುಂಬಿ ಹರಿಯುತ್ತಿರುವ ಕೆರೆಗೆ ಬಾಗಿನವನ್ನು ಅರ್ಪಿಸುವ ಸಂದರ್ಭದಲ್ಲಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರದಲ್ಲಿ ಭಾಗಿಯಾಗಿ ಮಾತನಾಡಲಾಯಿತು.
ಕೆರೆ ತುಂಬಿಸುವ ಯೋಜನೆಯಿಂದ ಹಾಗೂ ಖಿಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯಿಂದ ಬೇಸಿಗೆಕಾಲದಲ್ಲಿ ರೈತರ ತೆರದ ಬಾವಿಗಳು ಹಾಗೂ ಕೊಳವೆ ಬಾವಿಗಳ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ ರೈತರ ಬೆಳೆಗಳಿಗೆ ಸಹಾಯವಾಗಲಿದೆ ಹಾಗೂ ಜನ ಜಾನುವಾರುಗಳಿಗೆ ನೀರಿನ ಬವಣೆಯನ್ನು ನಿವಾರಿಸಲಿದೆ. ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ರಾಜು.ಕಾಗೆ ಅವರು ಮತ್ತು ಊರಿನ ಎಲ್ಲ ಗುರುಹಿರಿಯರು ಉಪಸ್ಥಿತರಿದ್ದರು.