ಬೆಂಗಳೂರು
ಸಿಎಂ ಪತ್ನಿ ಮತ್ತು ಸಚಿವ ಭೈರತಿಗೆ ಇಡಿ ನೋಟಿಸ್;ಇದು ರಾಜಕೀಯ ಪ್ರೇರಿತ;ಡಿ.ಕೆ.ಶಿವಕುಮಾರ್

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ಧರಾಮಯ್ಯನವರ ಪತ್ನಿ ಮತ್ತು ಸಚಿವ ಭೈರತಿ ಅವರಿಗೆ ಇ.ಡಿ. ನೋಟಿಸ್ ಜಾರಿ ಮಾಡಿದೆ. ಇದು ರಾಜಕೀಯ ಪ್ರೇರಿತವೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇದು ರಾಜಕೀಯ ಪ್ರೇರಿತ. ನನ್ನ ಪ್ರಕಾರ ನನ್ನ ಕೇಸು ಕೂಡ ಇದೇ ರೀತಿ ನಡೆಯಿತು. ಈಗಾಗಲೇ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಲೋಕಾಯುಕ್ತ ತನಿಖೆ ವೇಳೆ ಇನ್ನೊಂದು ತನಿಖೆ ಬರಲ್ಲ. ಏಕಕಾಲಕ್ಕೆ ಎರಡು ತನಿಖೆ ಮಾಡಲು ಬರುವುದಿಲ್ಲ. ಈ ಬಗ್ಗೆ ಸಾಕಷ್ಟು ಜಡ್ಜಮೆಂಟಗಳಿವೆ ಎಂದಿದ್ದಾರೆ.