ವಕ್ಕುಂದ ಗ್ರಾಮದಲ್ಲಿ ಹೆಣ್ಣು ಕರುಗಳ ಪ್ರದರ್ಶನ ಗಮನ ಸೆಳೆಯಿತು.

ಬೈಲಹೊಂಗಲ್ : ಆಕಳು ಹಾಗೂ ಎಮ್ಮೆ ಕರುಗಳ ಸಾಕಾಣಿಕೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಪ್ರೋತ್ಸಾಹಿಸುವ ಉದ್ದೇಶದಿಂದ ಬೈಲಹೊಂಗಲ ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಸೋಮವಾರ ಆಯೋಜಿಸಲಾದ ಕರುಗಳ ಪ್ರದರ್ಶನ ಗಮನ ಸೆಳೆಯಿತು.
ಜಿಲ್ಲಾ ಪಂಚಾಯತಿ,ಬೆಳಗಾವಿ ತಾಲೂಕು ಪಂಚಾಯತ್ ಬೈಲಹೊಂಗಲ್ ಗ್ರಾಮ ಪಂಚಾಯತ್ ಒಕ್ಕುಂದ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬೈಲಹೊಂಗಲ,ಪಶು ಚಿಕಿತ್ಸಾಲಯ ಆನಿಗೋಳ, ಹಾಲು ಉತ್ಪಾದಕರ ಸಹಕಾರ ಸಂಘಗಳು ಒಕ್ಕುಂದ ಸಂಯುಕ್ತ ಆಶ್ರಯದಲ್ಲಿ ಹೆಣ್ಣು ಕರುಗಳ ಪ್ರದರ್ಶನ ಜರುಗಿತು ಬೈಲಹೊಂಗಲ ಮತಕ್ಷೇತ್ರದ ಮಾನ್ಯ ಶಾಸಕರು ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಮಹಾಂತೇಶ್ ಕೌಜಲಗಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ರೈತರು ಹೆಚ್ಚು ಯುವಕರು ಹೈನುಗಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಆದಾಯ ವೃದ್ಧಿ ಮಾಡಿಸಿ ತಾವು ಆರ್ಥಿಕವಾಗಿ ಸಬಲರಾಗಿ ದೇಶದ ಆಹಾರ ಭದ್ರತೆಗೆ ಉತ್ತಮ ಕೊಡುಗೆ ನೀಡಬೇಕೆಂದು ತಿಳಿಸಿದರು..
ಶ್ರೀ ಸಂಗಣ್ಣ ಬಸಪ್ಪ ಭದ್ರಶೆಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರು ಒಕ್ಕುಂದ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.. ಶ್ರೀಮತಿ ರೇಖಾ ಲಕ್ಷ್ಮಣ ಡವಳೆ ಉಪಾಧ್ಯಕ್ಷರು ಗ್ರಾಮ ಪಂಚಾಯತ್ ಒಕ್ಕುಂದ, ಶ್ರೀಮತಿ ಕಾವ್ಯ ಬಸಪ್ಪ ಹುಳಪಲ್ಲೆ ಅಧ್ಯಕ್ಷರು ಮಹಿಳಾ ಸಂಜೀವಿನಿ ಒಕ್ಕೂಟ, ಹಾಗೂ ಡಾ: ಶ್ರೀಕಾಂತ್ ಎಂ ಗಾಂವಿ ಮುಖ್ಯ ಪಶುವೈದ್ಯಾಧಿಕಾರಿಗಳು(ಆಡಳಿತ) ಪಶು ಆಸ್ಪತ್ರೆ ಬೈಲಹೊಂಗಲ, ಡಾ:ಮಂಜುನಾಥ್ ಕುಲಕರ್ಣಿ ಪಶುವೈದ್ಯಾಧಿಕಾರಿಗಳು ಕೆಎಂಎಫ್ ಯರಗಟ್ಟಿ ವಿಭಾಗ, ಶ್ರೀ ಶ್ರೀಕಾಂತ ಕೋಟಗಿ ಕಾರ್ಯದರ್ಶಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಬಸವನಗರ ಒಕ್ಕುಂದ, ಶ್ರೀ ಪ್ರಕಾಶ ಪಾಟೀಲ ಕಾರ್ಯದರ್ಶಿ ಹಾಲು ಉತ್ಪಾದಕರ ಸಹಕಾರ ಸಂಘ ಒಕ್ಕುಂದ ಇವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.. ಡಾ:ಶ್ರೀಕಾಂತ ಎಂ ಗಾಂವಿ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಪಶು ಆಸ್ಪತ್ರೆ ಬೈಲಹೊಂಗಲ ಇವರು ಹುಟ್ಟಿದ ಕರುಗಳ ಪಾಲನೆ, ಗಿಣ್ಣದ ಹಾಲಿನ ಮಹತ್ವ, ಕರುಗಳಿಗೆ ಜಂತುನಾಶಕ ಕುಡಿಸುವುದು ಹಾಗೂ ಕರುಗಳ ಲಸಿಕೆ ಕುರಿತು ತಿಳಿಸಿದರು…
ಪ್ರದರ್ಶನದಲ್ಲಿ ಆರೋಗ್ಯಕರವಾಗಿದ್ದ ಅತ್ಯುತ್ತಮ ಕರುಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಹಾಗೂ ಪ್ರದರ್ಶನದಲ್ಲಿ ಪಾಲ್ಗೊಂಡ ಎಲ್ಲ ಕರುಗಳಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಜರ್ಸಿ, ಹೆಚ್ ಎಫ್,ದೇಶಿ ಆಕಳುಗಳ ಹಾಗೂ ಎಮ್ಮೆಗಳ ಕರುಗಳು ಸೇರಿದಂತೆ ಬೈಲಹೊಂಗಲ ಹಾಗೂ ಅನಿಗೋಳ ಕೊರವಿಕೊಪ್ಪ, ಒಕ್ಕುಂದ ಗ್ರಾಮಗಳಿಂದ ಸುಮಾರು 70ಕ್ಕೂ ಅಧಿಕ ಕರುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು… ನಿರ್ಣಾಯಕರಾಗಿ ಡಾ: ವಿರೂಪಾಕ್ಷಿ ಅಡ್ಡಣಗಿ, ಡಾ:ವಿಠ್ಠಲ ತಡಕೋಡ, ಡಾ:ಸಂಜೀವ ಗವಿಮಠ,ಡಾ:ಸಿದ್ರಾಮ ಒಡೆಯರ, ಡಾ: ಮಹಾಂತೇಶ ಮೇಟಿ, ಡಾ:ವೀರೇಶ ಎಚ್ ಬಿ, ಡಾ: ಮೋಹನ ಬಿ ಆರ್,ಡಾ:ರೋಹಿತ ಅನ್ವಲಮಠ ಉಪಸ್ಥಿತರಿದ್ದರು…
ಹಾಗೂ ಡಾ:ಮಹೇಶ ಚವಡಿ ಹಿರಿಯ ಪಶುವೈದ್ಯಾಧಿಕಾರಿಗಳು, ಶ್ರೀ ಪ್ರವೀಣ ಸಿದ್ಧನಾಯ್ಕರ್ ಪ ವೈ ಪ ಪ ಚಿ ಅನಿಗೋಳ ಹಾಗೂ ತಾಲ್ಲೂಕಿನ ತಾಂತ್ರಿಕ ಸಿಬ್ಬಂದಿಗಳು ಮತ್ತು ಪಶುಸಖಿಯರು ಹಾಜರಿದ್ದರು..ಒಕ್ಕುಂದ ಗ್ರಾಮದ ಹಿರಿಯರಾದ ಶ್ರೀ ಸಿ ಕೆ ಮೆಕ್ಕೆದ, ಶ್ರೀ ರಾಮನಗೌಡ ಪಾಟೀಲ, ಹಾಗೂ ಪರ್ವತಗೌಡ ಪಾಟೀಲ ಕಾರ್ಯಕ್ರಮಕ್ಕೆ ಸಾಕ್ಷಿಯಾದರು…