ಬೆಳಗಾವಿ
ಬೆಳಗಾವಿ ಮೂಲದ ಸುಪ್ರಸಿದ್ಧ ಅಮೇರಿಕನ್ ವೈದ್ಯ ಡಾ. ಸಂಪತ್ ಕುಮಾರ ಶಿವಣಗಿ ಇನ್ನಿಲ್ಲ.

ಬೆಳಗಾವಿ: ಸುಪ್ರಸಿದ್ಧ ಭಾರತೀಯ ಮೂಲದ ಅಮೇರಿಕನ್ ವೈದ್ಯ, ಶಿವಣಗಿ ಇಂಡಿಯನ್ ಅಮೇರಿಕನ್ ಫೋರಂ ಫಾರ್ ಪೊಲಿಟಿಕಲ್ ಎಜ್ಯುಕೇಷನನ ಅಧ್ಯಕ್ಷ ಡಾ. ಸಂಪತ್ ಕುಮಾರ ಶಿವಣಗಿ ಅವರು ನಿಧನರಾಗಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಮೂಲದ ಡಾ. ಸಂಪತಕುಮಾರ ಶಿವಣಗಿ ನಿಧನರಾಗಿದ್ದಾರೆ. ಹಲವಾರು ವರ್ಷಗಳಿಂದ ಮಿಸ್ಸಿಸ್ಸಿಪ್ಪಿಯಲ್ಲಿ ಮಾನಸಿಕ ಆರೋಗ್ಯ ವಿಭಾಗದ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲದೇ ಅಮೇರಿಕನ್ ಅಸೋಸಿಯೇಷನ್ ಆಫ್ ಫಿಜಿಶಿಯನ್ಸ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇತ್ತಿಚೇಗೆ ಬೆಳಗಾವಿಯಲ್ಲಿ ಕೆ.ಎಲ್.ಇ ಸಂಸ್ಥೆಯ ವತಿಯಿಂದ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಲಾಗಿದ್ದು, ಇದಕ್ಕಾಗಿ ಕೋಟ್ಯಾಂತರ ರೂಪಾಯಿಯ ದಾನವನ್ನು ನೀಡಿ ಮಾದರಿಯಾಗಿದ್ದಾರೆ. ಮೃತರು ಪತ್ನಿ, ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.