ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಜಿಲ್ಲಾ ಶಾಖೆಯ ವಾರ್ಷಿಕೋತ್ಸವ “ಯಕ್ಷಗಾನ ಪ್ರದರ್ಶನ”.

ಬೆಳಗಾವಿ: ಇತ್ತಿಚಿನ ದಿನಮಾನಗಳಲ್ಲಿ ಮಾನವೀಯ ಸಂಬಂಧಗಳು ಕಳೆದು ಹೋಗುತ್ತಿದ್ದು, ಪ್ರತಿಯೊಬ್ಬರು ತಮ್ಮ ತಮ್ಮಲ್ಲೇ ವ್ಯಸ್ಥವಾಗಿರುತ್ತಾರೆ. ಭಾವನಾತ್ಮಕತೆ ಉಳಿದಿಲ್ಲವೆಂದು ಧಾರವಾಡದ ಹಿರಿಯ ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಹೇಳಿದರು.
ಇಂದು ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಕರ್ನಾಟಕ ಲೇಖಕಿಯರ ಸಂಘ ಬೆಳಗಾವಿ ಜಿಲ್ಲಾ ಶಾಖೆಯ ವಾರ್ಷಿಕೋತ್ಸವವನ್ನು ಆಯೋಜಿಸಲಾಗಿತ್ತು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಕೆ. ಆರ್. ಸಿದ್ಧಗಂಗಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಧಾರವಾಡದ ಹಿರಿಯ ಸಾಹಿತಿಗಳಾದ ಡಾ. ಹೇಮಾ ಪಟ್ಟಣಶೆಟ್ಟಿ, ಯಕ್ಷಗಾನ ಕಲಾವಿದರು ಮತ್ತು ಸಾಹಿತಿಗಳಾದ ಡಾ. ಪ್ರಜ್ಞಾ ಮತ್ತಿಹಳ್ಳಿ ಅವರು ಉಪಸ್ಥಿತರಿದ್ಧರು.
ಈ ವೇಳೆ ಮಾತನಾಡಿದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧಾರವಾಡದ ಹಿರಿಯ ಸಾಹಿತಿ ಡಾ. ಹೇಮಾ ಪಟ್ಟಣಶೆಟ್ಟಿ ಅವರು ಇತ್ತಿಚಿಗೆ ಮಾನವೀಯ ಜೀವನದಲ್ಲಿ ಸಂಬಂಧಗಳು ಕಳೆದು ಹೋಗುತ್ತಿವೆ ಸಕಾರಾತ್ಮಕ ಚರ್ಚೆಗಳು ನಡೆಯುತ್ತಿಲ್ಲ. ಚಟುವಟಿಕೆಯಲ್ಲಿರುವ ಕ್ರಿಯಾಶೀಲತೆಯನ್ನು ನಾವು ಕಳೆದುಕೊಂಡಿರುವುದು ದುರ್ದೈವದ ಸಂಗತಿ. ಭಾವನಾತ್ಮಕತೆ ಉಳಿಯುತ್ತಿಲ್ಲವೆಂದರು. ನಂತರ ಯಕ್ಷಗಾನದ ಪ್ರಸ್ತುತಿ ನಡೆಯಿತು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಜ್ಯೋತಿ ಬಾದಾಮಿ, ಕಾರ್ಯದರ್ಶಿ ಡಾ.ನಿರ್ಮಲಾ ಬಟ್ಟಲ್, ಖಜಾಂಚಿ ಡಾ. ನೀತಾ ರಾವ್, ಸುಧಾ ಪಾಟೀಲ್, ಸುಮಾ ಕಿತ್ತೂರ, ರಂಜನಾ ಗೋಧಿ, ಪ್ರೇಮಾ ತಹಶೀಲ್ದಾರ, ಜಯಶೀಲಾ ಬ್ಯಾಕೋಡ, ಹಮೀದಾ ಬೇಗಂ, ಶ್ವೇತಾ ನರಗುಂದ, ಲಲಿತಾ ಕೋಪರ್ಡೆ, ರಾಜನಂದಾ ಗಾರ್ಗಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.