ಮಾಘ ಶುಕ್ಲ ಪಕ್ಷದ ಪೌರ್ಣಿಮೆಯ ನಿಮಿತ್ಯ ಬೆಳಗಾವಿಯಲ್ಲಿ ಶ್ರೀ ಬನಶಂಕರಿದೇವಿ ಜಾತ್ರೋತ್ಸವ.

ಬೆಳಗಾವಿ: ಭಡಕಲ್ ಗಲ್ಲಿಯಲ್ಲಿರುವ ಶ್ರೀ ಬನಶಂಕರಿ ದೇವಿಯ ಮಾಘ ಶುಕ್ಲ ಪಕ್ಷದ ಪೌರ್ಣಿಮೆಯ ಜಾತ್ರಾ ಮಹೋತ್ಸವವು ಭಕ್ತಿಭಾವದಿಂದ ಆರಂಭಗೊಂಡಿದೆ.
ಬೆಳಗಾವಿ ಭಡಕಲ್ ಗಲ್ಲಿಯಲ್ಲಿರುವ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬೆಳಗಾವಿಯ ದೇವಾಂಗ ಹಟಗಾರ ಸಮಾಜದ ಶ್ರೀ ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮೀಟಿಯ ವತಿಯಿಂದ ಶ್ರೀ ಬನಶಂಕರಿಯ ಮಾಘ ಶುಕ್ಲ ಪಕ್ಷದ ಪೌರ್ಣಿಮೆಯ ಜಾತ್ರಾ ಮಹೋತ್ಸವವು ಭಕ್ತಿಭಾವದಿಂದ ನಡೆಯುತ್ತಿದೆ.
ಶನಿವಾರ ಫೆಬ್ರವರಿ 8 ರಿಂದ ಮಹಾಮಂಗಳಾರತಿ, ಮಹಾ ಅಭಿಷೇಕ, ಶ್ರೀ ದುರ್ಗಾ ಸಪ್ತಶತಿ ಪಾರಾಯಣ ಸೇರಿದಂತೆ ವಿವಿಧ ಪೂಜಾವಿಧಿಗಳು ನಡೆದವು. ಇಂದು ಮುಂಜಾನೆ ಅಭಿಷೇಕ, ಮಂಗಳಾರತಿ ಮತ್ತು ನವಚಂಡಿ ಹೋಮ ನಡೆಯಿತು. ನಾಳೆ ಬುಧವಾರದಂದು ಬೆಳಿಗ್ಗೆ ಅಭಿಷೇಕ, ಪೂಜೆ, ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ, ದೇವಿಯ ಪಲ್ಲಕ್ಕಿ ಮೆರವಣಿಗೆ, ಮಹಾ ಆರತಿ ನಡೆಯಲಿದೆ. ನಂತರ ಮಧ್ಯಾನ್ಹ ಮಹಾಪ್ರಸಾದ ನಡೆಯಲಿದೆ. ಇದರ ಸದುಪಯೋಗ ಪಡೆಯಬೇಕೆಂದು ಮಂದಿರ ಕಮೀಟಿಯ ಅಧ್ಯಕ್ಷರು ಇನ್ ನ್ಯೂಸಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. ಈ ವೇಳೆ ನೂರಾರು ಭಕ್ತರು ಭಾಗಿಯಾಗಿದ್ದರು. ಧಾರ್ಮಿಕ ಕಾರ್ಯಗಳನ್ನು ಯಶಸ್ವಿಗೊಳಿಸಲು ಮಂದಿರ ಕಮೀಟಿಯ ಸದಸ್ಯರು ಮತ್ತು ಪದಾಧಿಕಾರಿಗಳು ಶ್ರಮವಹಿಸುತ್ತಿದ್ದಾರೆ.