ಹಳ್ಳಿಗಳಿಗೆ ಹಳೆ ಬಸ್; ಪಾಟಾ ಕಟ್ ಆಗಿ ಗದ್ದೆಗೆ ನುಗ್ಗಿದ ಸಾವಳಗಿ ಗೋಕಾಕ ಬಸ್:

ಗೋಕಾಕ: ಬಸ್ ಘಟಕದಿಂದ ತಾಲ್ಲೂಕಿನ ಹಳ್ಳಿಗಳಿಗೆ ಹಳೆ ಬಸ್ಗಳನ್ನು ಬಿಡಲಾಗುತ್ತಿದೆ. ಆದ್ದರಿಂದ ರಸ್ತೆಯಲ್ಲಿ ಕೆಟ್ಟು ನಿಂತು, ಎಕ್ಸೆಲ್ ಪಾಟ ಕಟ್ ಆಗಿ ಹೊಲಗದ್ದೆಗೆ ಹಾರಿದ ಬಸ್ ಗ್ರಾಮೀಣ ಜನರ ನೆಮ್ಮದಿ ಕೆಡಿಸುತ್ತಿವೆ.
ಹಳ್ಳಿಗಳಿಗೆ ಬಿಡುವ ಬಸ್ಗಳ ಕಿಟಕಿ ಹಾಗೂ ಬಾಗಿಲುಗಳಿಂದ ಶಬ್ದ ಬರುವುದು ಹಾಗೂ ವಾಯು ಮಾಲಿನ್ಯ ಸಾಮಾನ್ಯವಾಗಿದೆ. ಇನ್ನೂ ಕೆಲವು ಬಸ್ಗಳು ನಿಗದಿತ ಕಿ.ಮೀ ಕ್ರಮಿಸಿ ಆಗಾಗ ದುರಸ್ತಿಗೆ ಒಳಗಾಗುತ್ತಿವೆ. ಮಳೆಗಾಲದಲ್ಲಿ ಚಾವಣಿ ತೊಟ್ಟಿಕ್ಕುತ್ತದೆ.
ಫೆಬ್ರುವರಿ ೧೨ ರಂದು ಇಂದು ಮುಂಜಾನೆ ಸುಮಾರು ೮ ಗಂಟೆಗಳ ಸಮಯದಲ್ಲಿ ಗೋಕಾಕ ಸಾವಳಗಿ ಬಸ್ ಗೋಕಾಕ ಹೊರ ವಲಯದಲ್ಲಿ ಬಸ್ ಬಿದ್ದು 60 ಜನರು ಇದ್ದರೂ ದೇವರ ಕೃಪೆಯಿಂದ ಯಾವುದೇ ಪ್ರಾಣ ಹಾನಿ ಆಗಿಲ್ಲ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಎಚ್ಚರ ವಹಿಸಬೇಕು ಅಷ್ಟೇ ಅಲ್ಲದೆ ಇದಕ್ಕೆ ಹಳೆ ಬಸ್ ಬಿಟ್ಟಿರುವುದೇ ಕಾರಣ ಎಂದು ಜನ ದೂರುತ್ತಾರೆ.
ಮತ್ತೊಂದೆಡೆ ಕೆಟ್ಟು ನಿಲ್ಲುವ ಬಸ್ಗಳಿಂದ ವಿದ್ಯಾರ್ಥಿಗಳು, ಪಟ್ಟಣಕ್ಕೆ ಬರುವ ಪ್ರಯಾಣಿಕರು ಹೈರಾಣಾಗಿದ್ದಾರೆ. ಇನ್ನೂ ತಾಲ್ಲೂಕಿನ ಭಾಗದ ಹಳ್ಳಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆಯೇ ಇಲ್ಲದಾಗಿದೆ ಎಂದು ಸಾರ್ವಜನಿಕ ಆರೋಪಿಸುತ್ತಾರೆ.