ಹಾವೇರಿ

ರೈತ ಸಂಪರ್ಕ ಕೇಂದ್ರಕ್ಕೆ ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳ ಭೇಟಿ

ಹಾವೇರಿ:  ನಗರದ ರೈತ ಸಂಪರ್ಕ ಕೇಂದ್ರಕ್ಕೆ ಬುಧವಾರ ಕರ್ನಾಟಕ ಉಪ ಲೋಕಾಯುಕ್ತ ಗೌರವಾನ್ವಿತ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಅವರು ಭೇಟಿ ನೀಡಿ, ರೈತರ ಯೋಜನೆಗಳ ಕುರಿತು ಅಧಿಕಾರಿ ಬಸನಗೌಡ ಪಾಟೀಲ್ ಇವರಿಂದ ಮಾಹಿತಿ ಪಡೆದುಕೊಂಡರು.

ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ, ಬೇಸಿಗೆಯಲ್ಲಿ ರಿಯಾಯತಿದರದಲ್ಲಿ ಕೃಷಿ ಉತ್ಪನ್ನಗಳ ಉಪಕರಣ ನೀಡುವುದು, ಹನಿ ನೀರಾವರಿ ಉಪಕರಣ ಒದಗಿಸುವುದು, ಟ್ರ್ಯಾಕ್ಟರ್ ಉಪಕರಣ ವಿತರಣೆ, ರಸ ಗೊಬ್ಬರಗಳ ವಿತರಣೆ ಮಾಡಲಾಗುತ್ತದೆ ಎಂದು ಉಪ ಲೋಕಾಯುಕ್ತರಿಗೆ ಮಾಹಿತಿ ನೀಡಿದರು.

ಈಗ ಸದ್ಯಕ್ಕೆ ರೈತರಿಗೆ ಕೃಷಿ ಭಾಗ್ಯ ಯೋಜನೆಯಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಡಲಾಗುತ್ತದೆ. ಅದರ ಜೊತೆ ತಾಡಪಲ್ ನೀಡಲಾಗುವುದು. ಇಲ್ಲಿ ರೈತರ ಹೆಸರಿಗೆ ಶೇ.75 ರಷ್ಟು ಬಿಲ್ ಮಾಡಲಾಗುವುದು. ಕೃಷಿ ಹೊಂಡ ಪೂರ್ಣವಾದ ಮೇಲೆ ಬಾಕಿ ಉಳಿದ ಶೇ.25 ರಷ್ಟು ಬಿಲ್ ಪಾವತಿ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಸ್ವಂತ ಟ್ರ್ಯಾಕ್ಟರ್ ಹೊಂದಿದ ರೈತರಿಗೆ ರೋಟರ್ ನೀಡಲಾಗುವುದು, ಇಲ್ಲಿ ಪರಿಶೀಷ್ಟ ಜಾತಿ ಮತ್ತು ಪಂಗಡಕ್ಕೆ ಪ್ರತಿಶತ ಶೇ.90 ಸಬ್ಸಿಡಿ ಹಾಗೂ ಸಾಮಾನ್ಯ ವರ್ಗದವರಿಗೆ ಪ್ರತಿಶತ 50 ಸಬ್ಸಿಡಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಯೋಜನೆಗಳ ಆಯ್ಕೆಗೆ ರೈತರನ್ನು ಎಫ್ ಐ ಡಿ ಮೂಲಕ ವಯಸ್ಸಿನ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಗುಜುರಾತ ಹಾಗೂ ಮಹಾರಾಷ್ಟ್ರದಿಂದ ಖರೀದಿಸಿದ ಟ್ರ್ಯಾಕ್ಟರ್ ಹೇಗೆ ಉಪಕರಣ ನೀಡಿದಿರಿ, ಇದು ಸಾಧ್ಯಾನಾ, ಇದನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬಳಿಕ ಉಪ ಲೋಕಾಯುಕ್ತರು ಕೃಷಿ ಉಪಕರಣಗಳ ಸಂಗ್ರಹಣೆ ಕೊಠಡಿಗೆ ತೆರಳಿ ಸಂಗ್ರಹಿಸಿದ ಉಪಕರಣಗಳನ್ನು ಪರಿಶೀಲಿಸಿದರು ಹೊರಗುತ್ತಿಗೆ ನೌಕರ ಫಕ್ಕೀರಪ್ಪ ಹಾಗೂ ವಿರೇಶ್ ಎಂಬುವರಿಂದ 6 ಖಾತೆಗಳಿಂದ ವಿವಿಧ ಜನರಿಗೆ ಠಿhoಟಿe ಠಿಚಿಥಿ ಮೂಲಕ ಹಣ ಸರಬರಾಜು ಮಾಡಿದ್ದು ಮೇಲ್ನೋಟಕ್ಕೆ ಹೊರಗುತ್ತಿಗೆ ನೌಕರರಿಂದ ಅವ್ಯವಹಾರ ಆಗುತ್ತಿರುವುದು ಕಂಡು ಬರುತ್ತಿದೆ. ಇವರ ಒಂದು ವರ್ಷದ ಬ್ಯಾಕ್ ಖಾತೆಯ ಸ್ಟೇಟ್‍ಮೆಂಟ್ ಹಾಗೂ ವರದಿ ನಾಳೆ ಒಳಗಾಗಿ ಸಲ್ಲಿಸಲು ಕೃಷಿ ಇಲಾಖೆ ಡಿ ಡಿ ಮಲ್ಲಿಕಾರ್ಜುನ ಅವರಿಗೆ ಸೂಚಿಸಿದರು.

Related Articles

Leave a Reply

Your email address will not be published. Required fields are marked *

Back to top button