ಬೆಳಗಾವಿ
ಮಹಾರಾಷ್ಟ್ರದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ…

ಬೆಳಗಾವಿ :ಮಹಾರಾಷ್ಟ್ರದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ…..
ಮೂರು ಜನ ಆರೋಪಿಗಳನ್ನು ಬಂಧಿಸಿದ ಸಾಂಗ್ಲಿ ಪೊಲೀಸರು……
ಮಹಾರಾಷ್ಟ್ರದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ
ಮೇಲೆ ಸಾಮೂಹಿಕ ಅತ್ಯಾಚಾರಗೈದ ನೀಚರು
ಕರ್ನಾಟಕ ಮೂಲದ ಎಂಬಿಬಿಎಸ್ 3ನೇ ವರ್ಷದ ವಿದ್ಯಾರ್ಥಿನಿ
ಮೂವರು ಆರೋಪಿಗಳನ್ನು ಬಂಧಿಸಿದ ಸಾಂಗ್ಲಿ ಪೊಲೀಸರು
ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ
ಕರ್ನಾಟಕ ಮೂಲದ ಎಂಬಿಬಿಎಸ್ ಮೂರನೇ ವರ್ಷದ ವಿದ್ಯಾರ್ಥಿನಿ ಮೇ 18ರಂದು ಸಿನಿಮಾ ನೋಡಲು ಹೋದಾಗ ಮೂವರು ಕಿರಾತಕರು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಯಾರಿಗೂ ಹೇಳದಂತೆ ಆಕೆಯ ಮೇಲೆ ಬೆದರಿಕೆಯನ್ನು ಹಾಕಿದ್ದಾರೆ.
ಬಳಿಕ ಪೋಷಕರ ಸಹಾಯದಿಂದ ಸಾಂಗ್ಲಿ ವಿಶ್ರಂ ಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು,ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಇಂದು ಅತ್ಯಾಚಾರ ಪ್ರಕರಣ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಪುಣೆ, ಸಾಂಗ್ಲಿ ಹಾಗೂ ಸೊಲ್ಲಾಪುರ ಮೂಲದ ಮೂವರು ಕೀಚಕರನ್ನು ಹೆಡೆಮುರಿ ಕಟ್ಟಿದ್ದಾರೆ.
ಈ ಕುರಿತು ಸಾಂಗ್ಲಿ ಜಿಲ್ಲೆಯ ವಿಶ್ರಮ್ ಭಾಗ ಪೋಲಿಸ್ ಠಾಣೆಯ ಪಿಎಸ್ಐ ಸುಧೀರ್ ಬಾಲೇರಾವ ಮಾಹಿತಿ ನೀಡಿದರು