ಬೆಳಗಾವಿ

ಬೆಳಗಾವಿ ನಗರ ಹಾಗೂ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಸಭೆ.

ಬೆಳಗಾವಿ: ನಗರ ಹಾಗೂ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಸಮಿತಿಯ ಸದಸ್ಯರುಗಳ ಸಭೆ ಬೆಳಗಾವಿ ದಿ 13/02/25 ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಿತ್ತೂರು ಕರ್ನಾಟಕ ವಿಭಾಗದ ಕಾಂಗ್ರೆಸ್ ಭವನ ನಿರ್ಮಾಣ ಸಮಿತಿಯ ಸದಸ್ಯರುಗಳ ಸಭೆ ದಿ 13 ರಂದು ಬೆಳಿಗ್ಗೆ 11:00 ಘಂಟೆಗೆ ಬೆಳಗಾವಿ ನಗರದಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜರುಗಿತು, ಸಭೆಯ ಅಧ್ಯಕ್ಷತೆಯನ್ನು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕ ಶ್ರೀ ಆಸಿಫ್ ಉರ್ಫ್ ರಾಜು ಸೇಟ ವಹಿಸಿದ್ದರು, ಮೊದಲಿಗೆ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶ್ರೀ ವಿನಯ್ ನಾವಲಗಟ್ಟಿ ರವರು ಸ್ವಾಗತಿಸಿದರು, ಪ್ರಸ್ತಾವಿಕವಾಗಿ ಸಮಿತಿಯ ಸದಸ್ಯರಾದ ಶ್ರೀ ಎಫ ಹೆಚ್ ಜಕ್ಕಪ್ಪನವರ ಮಾತನಾಡಿದರು.

ತದನಂತರ ಮಾತನಾಡಿದ ಸಮಿತಿಯ ಸದಸ್ಯರಾದ ಮಾಜಿ ಶಾಸಕ ಶ್ರೀ ಮೋಹನ್ ಲಿಂಬಿಕಾಯಿರವರು ಹಲವಾರು ಬ್ಲಾಕ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಿಂದ ಮಾಹಿತಿಯನ್ನು ಪಡೆದರಲ್ಲದೆ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಅಡಿಯಲ್ಲಿ ಕಡ್ಡಾಯವಾಗಿ ಕಾಂಗ್ರೆಸ್ ಕಚೇರಿಯನ್ನು ಹೊಂದಬೇಕೆಂದು ಪಕ್ಷ ಬಯಸಿದ್ದು ಅದರಂತೆ ಎ ಐ ಸಿ ಸಿ ಅಧ್ಯಕ್ಷರ ಆದೇಶದ ಮೇರೆಗೆ ಕೆಪಿಸಿಸಿ ಅಧ್ಯಕ್ಷರು ಕಾರ್ಯೋನ್ಮುಖರಾಗಿದ್ದು ತಾವುಗಳು ಸಹಕರಿಸಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಚೇರ್ಮನ್ ಹಾಗೂ ಮಾಜಿ ಸಚಿವ ಶ್ರೀ ವೀರ್ ಕುಮಾರ್ ಪಾಟೀಲ್ ರವರು ನಗರ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳು ಈ ಕುರಿತು ಹೆಚ್ಚಿನ ಮುತುವರ್ಜಿ ವಹಿಸಿ ತಾವುಗಳು ಖುದ್ದಾಗಿ ಎಲ್ಲಾ ಬ್ಲಾಕುಗಳಿಗೆ ತೆರಳಿ ಕಟ್ಟಡ ಖರೀದಿಗೆ ಬೇಕಾದ ಜಾಗವನ್ನು ಪರಿಶೀಲಿಸಿ ಎಲ್ಲ ದಾಖಲೆಗಳೊಂದಿಗೆ ಮುಂದಿನ ಸಭೆಯಲ್ಲಿ ಸಮಿತಿಗೆ ಒಪ್ಪಿಸಬೇಕೆಂದು ಕೇಳಿಕೊಂಡರು, ಸಭೆಯಲ್ಲಿ ಸಮಿತಿಯ ಚೆರ್ಮನ್ ಗಳಾದ ಶ್ರೀ ವೀರ ಕುಮಾರ್ ಪಾಟೀಲ್ ಸದಸ್ಯರುಗಳಾದ ಶ್ರೀ ಮೋಹನ್ ಲಿಂಬಿಕಾಯಿ ಶ್ರೀ ಎಫ್ ಎಚ್ ಜಕ್ಕಪ್ಪನವರ ಶ್ರೀ ವಸಂತ ಲದವ ಶ್ರೀ ರಾಜಶೇಖರ್ ಮೆಣಸಿನಕಾಯಿ ಹಾಗೂ ಶ್ರೀಮತಿ ಗೀತಾ ಥವಂಶಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು, ಸಭೆಯಲಿ ಬೆಳಗಾವಿ ನಗರ ಹಾಗೂ ಜಿಲ್ಲಾ ಗ್ರಾಮೀಣ ವ್ಯಾಪ್ತಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಗಳು ಆಗಮಿಸಿದ್ದರು, ವಂದನೆಗಳೊಂದಿಗೆ

Related Articles

Leave a Reply

Your email address will not be published. Required fields are marked *

Back to top button