ಧಾರವಾಡ

ಧಾರವಾಡ ರಾಯಾಪುರ ಕೈಗಾರಿಕೆ ಪ್ರದೇಶದಲ್ಲಿ ಗೀಡಗಂಟೆಗಳ ಕಾರಬಾರು ಅಗ್ನಿ ಅವಘಡದ ಭೀತಿ

ಧಾರವಾಡ : ಕೈಗಾರಿಕೆ ಪ್ರದೇಶಗಳ‌ ಅಂದ್ಮೇಲೆ ಅಲ್ಲಿ‌ ಕೈಗಾರಿಕೆಗಳ ಶೆಡ್, ಗೂಡೌನ ಕಾಣಬೇಕು ಉತ್ತಮ ರಸ್ತೆ ಇರಬೇಕು, ಆದರೆ ಧಾರವಾಡ ರಾಯಪುರ ಕೈಗಾರಿಕೆ ಪ್ರದೇಶದಲ್ಲಿ ಕೈಗಾರಿಕೆಗಳಿಗಿಂತ ದುಪ್ಪಟ್ಟು ಅವ್ಯವಸ್ಥೆಯೇ ಕಣ್ಣಿಗೆ ಕಾಣುತ್ತಿದ್ದು, ಗೀಡಗಂಟೆಗಳ ಕಾರುಬಾರು ಜೋರಾಗಿದೆ. ರಸ್ತೆ ಪಕಕ್ಲೆ ನೇಡಲಾದ ಗೀಡಗಳು ಸರಿಯಾದ ನಿರ್ವಹಣೆ ಇಲ್ಲದೆ ರಸ್ತೆಗೆ ಬಾಗಿ ಓಡಾಟ ನಡೆಸಲು ವಾಹನ‌ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿವೆ.

ಹೌದು ಇದು ಧಾರವಾಡ ರಾಯಾಪುರ ಕೈಗಾರಿ‌ಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ. ಕೈಗಾರಿಕೆ ಪ್ರದೇಶದಲ್ಲಿ ರಸ್ತೆ ಅಕ್ಕಪಕ್ಕ ಗೀಡಗಂಟೆಗಳು ಬೃಹತಾಗಿ ಬೆಳೆದು ನಿಂತಿದ್ದು, ಕಂಪನಿಗಳೇ ಇವುಗಳ ಮದ್ಯ ಕಾಣದಾಗಿರುವ ಸ್ಥಿತಿ ಇಲ್ಲಿ‌ ನಿರ್ಮಾಣವಾಗಿದೆ. ಜತೆಗೆ ಮುಖ್ಯ‌ರಸ್ತೆಯಲ್ಲಿಯೇ‌ಕಸ ವಿಲೇವಾರಿ‌ ಕೂಡಾ ಮಾಡಲಾಗುತ್ತಿದ್ದು, ಇದರಿಂದ ಕೈಗಾರಿ ಪ್ರದೇಶದ ವಾತಾವರಣವೇ ಕೆಟ್ಟು ಹೋಗಿದೆ. ಅಲ್ಲದೆ ಕಸಕ್ಕೆ ಕಿಡಗೇಡಿಗಳು ಬೆಂಕಿ ಹಚ್ಚಿ‌ಹೋಗುತ್ತಿದ್ದು, ಯಾವಾಗ ಇಲ್ಲಿ ಬೆಂಕಿಯ ಅವಘಡ ಸಂಭವಿಸುತ್ತೋ ಎಂಬ ಆತಂಕ‌ ಇಲ್ಲಿಮ ಸ್ಥಳೀಯರಲ್ಲಿ ಕಾಡುತ್ತಿದೆ.

ರಸ್ತೆ ಪಕ್ಕ‌ ನೇಡಲಾದ ಗೀಡಗಳು ರಸ್ತೆಗೆ ಬಾಗಿ ನಿಂತಿದ್ದು, ಎರಡು ವಾಹಮ ಸಾಗುವ ದಾರಿ ಈಗ ಒಂದು ವಾಹನ ಹೋಗಲು ಹಿಂದೆ ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದ್ದು, ಸ್ಥಳೀತರು ಕೈಗಾರಿಕಾ ಅಭಿವೃದ್ಧಿ ಮಂಡಳಿ ವಿರುದ್ಧ ಹಿಡಿ‌ಶಾಪ ಹಾಕುತ್ತಿದ್ದಾರೆ. ಈಗಲಾದ್ರೂ ಆಡಳಿತ ಮಂಡಳಿ ಈ ಕಡೆ ಗಮನ ಹರಿಸಿ ಅವ್ಯವಸ್ಥೆ ಸರಿ‌ಪಡಿಸುತ್ತೋ ಇಲ್ವೋ ಕಾದು ನೋಡಬೇಕಾಗಿದೆ.

Related Articles

Leave a Reply

Your email address will not be published. Required fields are marked *

Back to top button