ಅಭಯ್ ಪಾಟೀಲ್ ಹಾಕಿದ ಬಾಲಿಗೆ ಬ್ಯಾಟು ಬೀಸಿದ ಆಸೀಫ್ ಸೇಠ್.

ಬೆಳಗಾವಿ: ಇಂದು ಮೇಯರ್ ಟ್ರಾಫಿ ಹಿನ್ನೆಲೆ ಆಯೋಜಿಸಿದ್ದ ಕ್ರಿಕೆಟ್ ಮ್ಯಾಚಿಗೆ ಶಾಸಕದ್ವಯರು ಚಾಲನೆಯನ್ನು ನೀಡಿದರು. ನಗರಸೇವಕರು ಮತ್ತು ಮೀಡಿಯಾ ತಂಡದ ನಡುವೆ ಆಕರ್ಷಕ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ಬೆಳಗಾವಿಯ ಪೊಲೀಸ್ ಕವಾಯತ್ತು ಮೈದಾನದಲ್ಲಿ ಮೇಯರ್ ಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ನಗರಸೇವಕರು ಮತ್ತು ಮಿಡೀಯಾ ತಂಡದ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಬೆಳಗಾವಿಯ ಉತ್ತರ ಶಾಸಕ ಆಸೀಫ್ ಸೇಠ್ ಮತ್ತು ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಕ್ರಿಕೆಟ್ ಆಡುವ ಮೂಲಕ ಪಂದ್ಯಾವಳಿಗೆ ಚಾಲನೆಯನ್ನು ನೀಡಿದರು. ಅಭಯ್ ಪಾಟೀಲರ್ ಬಾಲಿಂಗ್ ಗೆ ಆಸೀಫ್ ಸೇಠ್ ಅವರು ಬ್ಯಾಟು ಬೀಸಿದ್ದು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತ್ತು.
ಆರೋಗ್ಯಕರ ಜೀವನಕ್ಕಾಗಿ ಶರೀರಕ್ಕೆ ಕಸರತ್ತು ನೀಡುವುದು ಬಹುಮುಖ್ಯವಾಗಿದೆ. ಈ ಹಿನ್ನೆಲೆ ಮೇಯರ್ ಕಾಲಾವಧಿ ಮುಕ್ತಾಯದ ವೇಳೆ ಪಂದ್ಯಾವಳಿ ಆಯೋಜಿಸಬೇಕೆಂದು ಕೇಳಲಾಗುತ್ತು. ಆದ್ದರಿಂದ ಇಂದು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಶುಕ್ರವಾರದಂದು ಮೇಯರ್ ಟ್ರೋಫಿಯಲ್ಲಿ ಖೋಖೋ ಮತ್ತು ಫೂಟಬಾಲ್ ಸ್ಪರ್ಧೆಗಳು ನಡೆದಿವೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದವು. ಸದೃಢ ದೇಹಕ್ಕೆ ಕ್ರೀಡಾಗಳು ಸಹಕಾರಿ. ಭಾನುವಾರದಂದು ಅಂತಿಮ ಪಂದ್ಯಾವಳಿ ನಡೆಯಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ಶುಭಾ ಬಿ. ತಿಳಿಸಿದರು.