ವಿಶ್ವವಿದ್ಯಾಲಯಗಳನ್ನು ಮುಚ್ಚುವುದು ದುರದೃಷ್ಟಕರ; ಬಿ.ವೈ. ವಿಜಯೇಂದ್ರ

ತುಮಕೂರು: ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸರಕಾರದ ನಿರ್ಧಾರ ಕುರಿತಂತೆ ಉತ್ತರ ನೀಡಿದ ಅವರು, ವಿಶ್ವವಿದ್ಯಾಲಯಗಳನ್ನು ಮುಚ್ಚುವುದು ದುರದೃಷ್ಟಕರ. ಬಿಜೆಪಿ ಸರಕಾರ ಇದ್ದಾಗ ತೆರೆದ ಹೊಸ ವಿವಿಗಳನ್ನು ಮುಚ್ಚುವ ಕೆಲಸವನ್ನು ಸರಕಾರ ಮಾಡುತ್ತಿದೆ. ಕಾರಣ ಏನು? ಇವುಗಳಿಗೆ 300 ಕೋಟಿ, 400 ಕೋಟಿ ಅನುದಾನ ಕೊಡಬೇಕಿದೆ. ಅನುದಾನ ಕೊಟ್ಟರೆ ವಿವಿಗಳು ಕೆಲಸ ಮಾಡಲು ಸಾಧ್ಯ ಮತ್ತು ಅದರಿಂದ ಬಡ ಮಕ್ಕಳಿಗೆ ಅನುಕೂಲ ಆಗುತ್ತದೆ. ಕಾಂಗ್ರೆಸ್ ಸರಕಾರದ ನಿರ್ಧಾರ ಶೋಭೆ ತರುವುದಿಲ್ಲ ಇದರಿಂದ ಒಳಿತಾಗುವುದಿಲ್ಲ ಎಂದು ಬಿ.ವೈ. ವಿಜಯೇಂದ್ರ ತಿಳಿಸಿದರು.
ಇದರಿಂದ ಮಕ್ಕಳಿಗೆ ಅನಾನುಕೂಲ ಆಗಲಿದೆ. ಮಕ್ಕಳಿಗೆ ಇವತ್ತು ಅನ್ಯಾಯ ಆಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇನ್ನಾದರೂ ರಾಜ್ಯ ಸರಕಾರ ಎಚ್ಚತ್ತುಕೊಂಡು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿ ಎಂದು ಆಗ್ರಹಿಸಿದರು. ಇವರ ಗ್ಯಾರಂಟಿಗಳಿಂದ ಅನುದಾನ ಹೊಂದಿಸಲು ಸಾಧ್ಯವಾಗುತ್ತಿಲ್ಲ ಪೆಟ್ರೋಲ್ ದರ ಏರಿಸಿದರು. ಸ್ಟಾಂಪ್ ಡ್ಯೂಟಿ ಹೆಚ್ಚಿಸಿದರು. ಬೇರೆ ಬೇರೆ ಬೆಲೆ ಏರಿಕೆ ಆಗುತ್ತಿದೆ. ಅನುದಾನ ಕೊಡಲು ಆಗದೆ ಯುನಿವರ್ಸಿಟಿಗಳನ್ನು ಮುಚ್ಚಿಹಾಕುವ ಕೆಲಸವನ್ನು ರಾಜ್ಯ ಸರಕಾರ ಹೊರಟಿದೆ. ಇದನ್ನು ಖಂಡಿತವಾಗಿ ಯಾರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದರು.