Uncategorized

ಉಗಾರ ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಜರಗಿತು.

ಉಗಾರ ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಜರಗಿತು.

ಉಗಾರ ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ಕಾರ್ತಿಕ ಮಾಸದ ದೀಪೋತ್ಸವ ಕಾರ್ಯಕ್ರಮ ಜರಗಿತು.ಸಮಾಜದಲ್ಲಿ ಕೆಲವರು ಹಿಂದೂ ಮುಸ್ಲಿಂ ಎಂಬ ಭೇದಭಾವ ಮಾಡುತ್ತಾರೆ. ಆದರೆ ಕಾಗವಾಡ ತಾಲೂಕಿನ ಉಗಾರ ಪಟ್ಟಣದ ಮುಸ್ಲಿಂ ಸಮಾಜ ಕೃಷ್ಣನ ಭಕ್ತ ಬಾಪುಸಾಹೇಬ್ ತಾಶೇವಾಲೆ ಇವರ ನೇತೃತ್ವದಲ್ಲಿ ಕಟ್ಟಿಸಿದ ಶ್ರೀ ಕೃಷ್ಣ ಮಂದಿರದಲ್ಲಿ ಅವರ ನೇತೃತ್ವದಲ್ಲಿ ಭಕ್ತಿಯಿಂದ ಅದ್ದೂರಿಯಾಗಿ ಕಾರ್ತಿಕ್ ಮಾಸದ ದೀಪೋತ್ಸವ ಕಾರ್ಯಕ್ರಮ ಆಚರಿಸಲಾಯಿತು.

ಶನಿವಾರ ಸಂಜೆ ಉಗಾರದ ಶ್ರೀ ಕೃಷ್ಣ ಮಂದಿರದಲ್ಲಿ ಮಂದಿರದ ಮುಖ್ಯಸ್ಥ ಬಾಪುಸಾಹೇಬ್ ತಾಶೇವಾಲೆ ಇವರ ನೇತೃತ್ವದಲ್ಲಿ ನೂರಾರು ಕೃಷ್ಣನಭಕ್ತರು ಪಾಲ್ಗೊಂಡು ಭಕ್ತಿಯಿಂದ ಕೃಷ್ಣನ ಆರಾಧನೆ ಮತ್ತು ಕಾರ್ತಿಕ ಮಾಸದ ದೀಪೋತ್ಸವ ನೆರವೇರಿಸುದಲ್ಲಿ ತಲ್ಲಿನ ರಾಗಿದ್ದರು.

ಬಾಪುಸಾಹೇಬ್ ತಾಶೇವಾಲೆÉ ಇವರು ಸಂಗೀತ ಕಲಾವಿದರು ಕಳೆದ 40 ವರ್ಷಗಳಿಂದ ಕೃಷ್ಣನ ಪಾರಿಜಾತ(ನಾಟಕ) ಮಾಡುತ್ತಾರೆ. ಅವರಿಗೆ ಕೃಷ್ಣನ ಅನುಕರಣೆವಾಗಿದ್ದು ತಮ್ಮ ಜೀವನ ಕೃಷ್ಣನ ಭಕ್ತಿಗೆ ಸಮರ್ಪಿತ ಮಾಡಿದ್ದಾರೆ, ಎಲ್ಲ ಧರ್ಮದ ಕೃಷ್ಣನ ಭಕ್ತರನ್ನು ಒಂದುಗೂಡಿಸಿ ಭಕ್ತರು ಆರ್ಥಿಕ ಮತ್ತು ವಸ್ತುರೂಪಗಳಲ್ಲಿ ದಾನ ನೀಡಿರುವ ದಾನದಲ್ಲಿ ಎರಡು ಅಂತಸ್ತದ ಸುಂದರವಾದ ಕೃಷ್ಣನ ಮಂದಿರ ನಿರ್ಮಿಸಿದ್ದಾರೆ, ಶ್ರೀ ಕೃಷ್ಣನ ಮೂರ್ತಿಯೊಂದಿಗೆ ಶ್ರೀ ವಿಠ್ಠಲ ಹಾಗು ಮತ್ತಿತರ ದೇವರ ಮೂರ್ತಿಗಳು ಸ್ಥಾಪಿಸಿದ್ದಾರೆ. ಇಲ್ಲಿಗೆ ಸಾವಿರಾರು ಭಕ್ತರು ಒಂದಾಗಿ ಕೃಷ್ಣನ ಆರಾಧನೆ ಮಾಡುತ್ತಾರೆ, ಇಲ್ಲಿಗೆ ಯಾವುದೇ ಧರ್ಮಗಳಲ್ಲಿ ಭೇದಭಾವ ಇಲ್ಲ ಕೃಷ್ಣನ ಬಗ್ಗೆ ಇರುವ ಅಪಾರ ಭಕ್ತಿ ಕಂಡು ಪ್ರತಿಯೊಬ್ಬರು ಅವರನ್ನು ಆದರದಿಂದ ಕಾಣುತ್ತಾರೆ.

ಕೃಷ್ಣ ಮಂದಿರ ಟ್ರಸ್ಟಿನ ಸದಸ್ಯ ಜಯಗೌಡ ಪಾಟೀಲ್ ಮಾತನಾಡಿ, ಬಾಪುಸಾಹೇಬ್ ತಾಶೇವಾಲೆ ಇವರು ಮುಸ್ಲಿಂ ಸಮಾಜದವರಾದರು ಅವರಲ್ಲಿ ಇರುವ ಕೃಷ್ಣನ ಭಕ್ತಿ, ಶ್ರದ್ಧೆ ಇಂದ ಎಲ್ಲರನ್ನೂ ಒಗ್ಗೂಡಿಸಿ ಯಾವುದೇ ಜಾತಿಯತೆ ಮಾಡದೆ ಕೃಷ್ಣನ ಆರಾಧನೆ ಮಾಡುತ್ತಾ ಅನೇಕ ಭಕ್ತರು ಸ್ವಪ್ರೇರಣೆಯಿಂದ ದಾನವಾಗಿ ನೀಡಿರುವ ಹಣ ಹಾಗೂ ವಸ್ತುಗಳು ಒಂದುಗೂಡಿಸಿ ಸುಂದರವಾದ ಮಂದಿರ ಕಟ್ಟಿಸಿದ್ದು ಇಲ್ಲಿಗೆ ಪ್ರತಿದಿನ ಪೂಜೆ ಅರ್ಚನೆ ನಡೆಯುತ್ತಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಭಕ್ತರು ಆಗಮಿಸಿದ್ದಾರೆ ಇವತ್ತು ಕಾರ್ತಿಕ ಮಾಸದ ನಿಮಿತ್ಯ ಭಕ್ತಿಯಿಂದ ದೀಪೋತ್ಸವ ಆಚರಿಸಿ ಕೃಷ್ಣನ ಆರಾಧನೆ ಮಾಡಲು ಎಲ್ಲರೂ ಒಂದುಗೂಡಿದ್ದೇವೆ ಎಂದು ಹೇಳಿದರು.

ಶ್ರೀ ಕೃಷ್ಣ ಮಂದಿರದ ಸದ್ಭಕ್ತರು ಹಾಗೂ ಟ್ರಸ್ಟಿ ಸದಸ್ಯರಾದ ಪ್ರಮೋದ ತಾಪಡಿಯ, ವಿಠ್ಠಲ್ ವಾಘೆ, ಅಶೋಕ ಶೆಟ್ಟಿ, ಸುರೇಶ್ ಮೇಟಕರಿ, ಜಯಗೌಡ ಪಾಟೀಲ್, ನಿವೃತ್ತ ಜಿಲ್ಲಾ ಪಶು ವೈದ್ಯಾಧಿಕಾರಿ ಬಾಹುಬಲಿ ಅಕಿವಾಟೆ, ಅನಿಲ್ ಕುಲಕರ್ಣಿ, ಅರ್ಚಕ ಹರಿ ಗೋಖಲೆ, ಬಾಳಸಾಹೇಬ್ ಶಿಂದೆ, ಮುಕುಂದ ಘಾರಗೆ ,ಮಹಿಳಾ ಸದ್ಭಕ್ತರಾದ ಪ್ರೇಮಾ ಪಾಟೀಲ್, ರೂಪಾಲಿ ಮೇಟಕರಿ, ಗೀತಾ ತಾಪಡಿಯ, ಸರಿತಾ ಗೋಖಲೆ, ವನಿತಾ ವಾಘೆ, ಕವಿತಾ ಪಾಟೀಲ್, ಮೀನಾ ಘಾರಗೆ, ಸುಜಾತ ಶೆಟ್ಟಿ, ಸುಜಾತಾ ಕದ್ದು, ಮಹಾವೀರ ಕರಜಗಿ, ಸುಭಾಷ್ ಶೆಟ್ಟಿ ಕಮಲೇಶ್ವರ್ ಅತಿಹೊಸೂರು ಸೇರಿದಂತೆ ಅನೇಕ ಭಕ್ತರು ಭಕ್ತಿಯಿಂದ ಕಾರ್ತಿಕ್ ದೀಪೋತ್ಸವ ಆಚರಿಸಿದರು.

Related Articles

Leave a Reply

Your email address will not be published. Required fields are marked *

Back to top button