ಬೆಂಗಳೂರು

ಗಣೇಶ್ ಕುಣಿಸಲು ಬಂದ ಜಾನಿ ಮಾಸ್ಟರ್..’Your’s Sincerely ರಾಮ್’ಗೆ ಖ್ಯಾತ ಕೊರಿಯೋಗ್ರಫರ್ ಎಂಟ್ರಿ

ಬೆಂಗಳೂರು: ತೆಲುಗು ಚಿತ್ರರಂಗದ ಖ್ಯಾತ ಕೊರಿಯೋಗ್ರಫರ್ ಜಾನಿ ಮಾಸ್ಟರ್ ಕನ್ನಡ ಚಿತ್ರರಂಗಕ್ಕೂ ಪರಿಚಿತರು. ತಮ್ಮ ಡ್ಯಾನ್ಸ್ ಕಲೆಯ ಮೂಲಕ ಎಲ್ಲರನ್ನೂ ಮೋಡಿ ಮಾಡಿದ್ದ ಅವರು ರಾಜಕುಮಾರ ಚಿತ್ರದ ಅಪ್ಪು ಡ್ಯಾನ್ಸ್ ಡ್ಯಾನ್ಸ್, ನಟಸಾರ್ವಭೌಮ ಚಿತ್ರದ ಓಪನ್ ದ ಬಾಟಲ್, ವಿಕ್ರಾಂತ್ ರೋಣ ಚಿತ್ರದ ರಾರಾ ರಕ್ಕಮ್ಮ ರೀತಿಯ ಸೂಪರ್ ಹಿಟ್ ಗೀತೆಗಳಿಗೆ ಡ್ಯಾನ್ಸ್ ಕಂಪೋಸ್ ಮಾಡಿದ್ದಾರೆ. ಸೂಪರ್ ಹಿಟ್ ಹಾಡುಗಳಿಗೆ ನಾಯಕ-ನಾಯಕಿಯರನ್ನು ಕುಣಿಸುವ ಅವರೀಗ ಮತ್ತೊಮ್ಮೆ ಸ್ಯಾಂಡಲ್ ವುಡ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇನ್ ಸ್ಪೆಕ್ಟರ್ ವಿಕ್ರಂ, ಮಾನ್ಸೂನ್ ರಾಗ, ರಂಗನಾಯಕ ಸಿನಿಮಾಗಳ ನಿರ್ಮಾಪಕ ವಿಖ್ಯಾತ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಚೊಚ್ಚಲ ಚಿತ್ರ ’Your’s Sincerely ರಾಮ್’. ಕಳೆದ ಗೌರಿ ಗಣೇಶ ಹಬ್ಬದಂದು ಸೆಟ್ಟೇರಿದ್ದ ಈ ಚಿತ್ರದ ಶೂಟಿಂಗ್ ಸದ್ಯ ಬೆಂಗಳೂರಲ್ಲಿ ಭರದಿಂದ ಸಾಗುತ್ತಿದೆ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ಇಬ್ಬರು ತ್ಯಾಗರಾಜರನ್ನು ಒಂದೇ ಫ್ರೇಮ್ ನಲ್ಲಿ ವಿಖ್ಯಾತ ಸೆರೆ ಹಿಡಿಯುತ್ತಿದ್ದಾರೆ. ರಮೇಶ್ ಅರವಿಂದ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸುತ್ತಿದ್ದು, ಇದೀಗ ’Your’s Sincerely ರಾಮ್’ ಅಂಗಳಕ್ಕೆ ಖ್ಯಾತ ಕೊರಿಯೋಗ್ರಫರ್ ಜಾನಿ ಮಾಸ್ಟರ್ ಎಂಟ್ರಿ ಕೊಟ್ಟಿದ್ದಾರೆ.

90ರ ದಶಕದ ರೆಟ್ರೋ ಸ್ಟೈಲ್ ನಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗುತ್ತಿದ್ದು, ಅದಕ್ಕಾಗಿ ಬೆಂಗಳೂರಿನಲ್ಲಿ 4 ದೊಡ್ಡ ಸೆಟ್ ಹಾಕಲಾಗಿದೆ. ಮಳೆ ಹುಡ್ಗ ಗಣೇಶ್ ಈ ಸಿಂಗಿಂಗ್ ಸೆನ್ಸೇಷನ್ ಗೆ ಹೆಜ್ಜೆ ಹಾಕಲಿದ್ದು, ಅವರನ್ನು ಜಾನಿ ಮಾಸ್ಟರ್ ಕುಣಿಸಲಿದ್ದಾರೆ. ಅನೂಪ್ ಸೀಳಿನ್ ಸಂಗೀತ, ಜಾನಿ ಮಾಸ್ಟರ್ ಕೊರಿಯೋಗ್ರಫಿಗೆ ಗೋಲ್ಡನ್ ಸ್ಟಾರ್ ಬಿಂದಾಸ್ ಆಗಿ ಡ್ಯಾನ್ಸ್ ಮಾಡಲಿದ್ದಾರೆ. ಸತ್ಯರಾಯಲ ನಿರ್ಮಾಣದ ’Your’s Sincerely ರಾಮ್’ ಸಿನಿಮಾಗೆ ನವೀನ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನ, ಯದುನಂದನ್ ಸಂಭಾಷಣೆ, ಗುಣ ಕಲಾ ನಿರ್ದೇಶನ ಚಿತ್ರಕ್ಕಿದೆ.

Related Articles

Leave a Reply

Your email address will not be published. Required fields are marked *

Back to top button