ಬೆಳಗಾವಿ

ತಂದೆ, ತಾಯಿ ಪ್ರೀತಿಗಾಗಿ ಹಂಬಲಿಸುತ್ತಿದ್ದ ಬೆಳಗಾವಿಯ ಅನಾಥ ಮಗುವನ್ನು ದತ್ತು ಪಡೆದ ಇಟಲಿ ದಂಪತಿ.

ಬೆಳಗಾವಿ: ಕಳೆದ ಎರಡುವರೆ ವರ್ಷಗಳಿಂದ ತಂದೆ, ತಾಯಿ ಪ್ರೀತಿ ಕಾಣದೆ ಚಿಕ್ಕುಂಬಿಮಠದ ಆರೈಕೆ ಕೇಂದ್ರದಲ್ಲಿ ಬೆಳೆದಿದ್ದ ಗಂಡು‌ ಮಗುವನ್ನು ಇಟಲಿಯ ದಂಪತಿಗಳು ದತ್ತು ಪಡೆದಿದ್ದು ತಂದೆ, ತಾಯಿ ಪ್ರೀತಿ ನೀಡಲು‌ ಮುಂದಾಗಿದ್ದಾರೆ.

.ಅವಧಿಗೂ ಮುನ್ನ ತಾಯಿಯ ಗರ್ಭದಿಂದ ಭೂಮಿಗೆ ಬಂದು ಜಿಲ್ಲಾಸ್ಪತ್ರೆಯಲ್ಲಿ ಅನಾಥವಾಗಿದ್ದ ಗಂಡು ಮಗುವನ್ನು ಚಿಕ್ಕುಂಬಿ ಮಠದ ಆರೈಕೆ ಕೇಂದ್ರದವರು ಮಗುವಿಗೆ ಚಿಕಿತ್ಸೆ ‌ಕೊಡಿಸಿ ಎರಡುವರೆ ವರ್ಷದಿಂದ ನೋಡಿಕೊಂಡು ಬಂದಿದ್ದರು. ಆದರೆ ಇಟಲಿಯ ದಂಪತಿಗಳು ಚಿಕ್ಕುಂಬಿ ಮಠದ ಆರೈಕೆ ಕೇಂದ್ರಕ್ಕೆ ಸಂಪರ್ಕಿಸಿ ಆ ಗಂಡು ಮಗುವನ್ನು ಸರಕಾರದ ಅನುಮತಿ ಪಡೆದು ನಿಯಮಾವಳಿ ಪ್ರಕಾರ ದತ್ತು ಪಡೆದಿದ್ದಾರೆ.

ಇಟಲಿಯ ದಂಪತಿಗಳ ಮದುವೆಯಾಗಿ 15 ವರ್ಷವಾದರೂ ಮಕ್ಕಳಾಗಿರಲಿಲ್ಲ. ಇವರು ಮಕ್ಕಳಿಗಾಗಿ ವಿವಿಧ ದೇಶಗಳ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ವೈದ್ಯರಿಗೆ ತೋರಿಸುವುದನ್ನು ಬಿಟ್ಟು ತಮ್ಮಗೆ ಯಾವ ರೀತಿ‌ ಮಗು ಇರಬೇಕು ಎಂದುಕೊಂಡಿದರೋ ಆ ರೀತಿಯ ಮಗು ಸಿಕ್ಕಿದ್ದು ಮಾತ್ರ ಬೆಳಗಾವಿಯ ಚಿಕ್ಕುಂಬಿಮಠದ ಆರೈಕೆ ಕೇಂದ್ರದಲ್ಲಿ ಕೂಡಲೇ ರಾಜ್ಯ ಸರಕಾರ ಮೂಲಕ ಜಿಲ್ಲಾಡಳಿತವನ್ನು ಸಂಪರ್ಕ ಮಾಡಿ ಮಗುವನ್ನು ದತ್ತು ಪಡೆದುಕೊಳ್ಳಲು ಬೇಕಾದ ಸಿದ್ಧತೆ ಮಾಡಿಕೊಂಡರು.

ಇಟಲಿಯಲ್ಲಿ ನೆಲೆಸಿರುವ ಮಕ್ಕಳಿಲ್ಲದ ದಂಪತಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿದ್ದರಿಂದ ದತ್ತು ಪ್ರಕ್ರಿಯೆಯ ಕಾನೂನಿನಡಿ ಮಗುವನ್ನು ಇಟಲಿಯ ದಂಪತಿಗೆ ನಿಯಮಾವಳಿಯಂತೆ ಜಿಲ್ಲಾಡಳಿತದಿಂದ ಹಸ್ತಾಂತರಿಸಲಾಗುತ್ತಿದೆ. ದತ್ತು ಪಡೆದ ದಂಪತಿ ಗಂಡು ಮಗುವನ್ನು ಬೆಂಗಳೂರಿಗೆ ಕರೆದೊಯ್ದ, ಅಲ್ಲಿಂದ ಇಟಲಿ ಕಡೆ ಪಯಣ ಬೆಳೆಸಲಿದ್ದಾರೆ ಚಿಕ್ಕುಂಬಿ ಮಠದ ಆರೈಕೆ ಕೇಂದ್ರದ ಸಿಬ್ಬಂದಿ ತಿಳಿಸಿದರು.
ಒಟ್ಟಾರೆ, ತಂದೆ, ತಾಯಿ ಪ್ರೀತಿಗಾಗಿ ಹಂಬಲಿಸುತ್ತಿದ್ದ ಬೆಳಗಾವಿಯ ಪುಟಾಣಿ ಗಂಡು ಮಗುವಿಗೆ ಇಟಲಿಯ ದಂಪತಿ ತಂದೆ ತಾಯಿ ಪ್ರೀತಿ ಕೊಡಲು ಮುಂದಾಗಿರುವುದು ಇಟಲಿ ಬೆಳಗಾವಿ ಬಾಂಧವ್ಯ ಬೆಸೆತಕ್ಕೆ ಕಾರಣವಾಗಿದ್ದು ಸುಳ್ಳಲ್ಲ.

Related Articles

Leave a Reply

Your email address will not be published. Required fields are marked *

Back to top button