ಬೆಳಗಾವಿಯಲ್ಲಿ ನಡೆಯಿತು ಯುದ್ಧದಲ್ಲಿ ಗಾಯಗೊಂಡ ಯೋಧರ ವಿಚಾರ ಸಂಕಿರಣ.

ಬೆಳಗಾವಿ: ಯುದ್ಧದಲ್ಲಿ ಗಾಯಗೊಂಡ ಯೋಧರ ವಿಚಾರ ಸಂಕಿರಣವನ್ನು ಬೆಳಗಾವಿ ಮರಾಠಾ ಲೈಟ್ ಇನಫೆಂಟ್ರಿ ರೆಜಿಮೆಂಟಲ್ ಸೆಂಟರನ ಶರ್ಕತ್ ಹಾಲಿನಲ್ಲಿ ಆಯೋಜಿಸಲಾಗಿತ್ತು.
ಬೆಳಗಾವಿಯ ಎಂ.ಎಲ್.ಐ.ಆರ್.ಸಿ ಯ ಬ್ರಿಗೇಡಿಯರ್ ಜಾಯದೀಪ್ ಮುಖರ್ಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೇಜರ್ ಜನರಲ್ ಸಿ.ಡಿ. ಸಾವಂತ್, ಲೆಫ್ಟಿನೆಂಟ್ ಜನರಲ್ ಅಸೀತ್ ಮಿಸ್ತ್ರಿ, ನಿವೃತ್ತ ಬ್ರಿಗೇಡಿಯರ್ ಸಿ. ಸಂದೀಪ್ ಕುಮಾರ್ ಇನ್ನುಳಿದ ಗಣ್ಯರು ಉಪಸ್ಥಿತರಿದ್ದರು. ಗಣ್ಯರ ಹಸ್ತದಿಂದ ವಿಚಾರ ಸಂಕಿರಣಕ್ಕೆ ಚಾಲನೆಯನ್ನು ನೀಡಲಾಯಿತು.
ಈ ವೇಳೆ ವಿಚಾರ ಸಂಕಿರಣವನ್ನು ಉದ್ಧೇಶಿಸಿ ಮಾತನಾಡಿದ ಮೇಜರ್ ಜನರಲ್ ಸಿ.ಡಿ. ಸಾವಂತ ಅವರು ದೇಶದ ರಕ್ಷಣೆಗಾಗಿ ಯುದ್ಧವನ್ನಾಡಿ ಅಂಗವೈಕಲ್ಯತೆಗೊಳಗಾದವರು ವಿಕಲಚೇತರನ್ನ ಮಹಾನ್ಚೇತನರು. ಯುದ್ಧದಲ್ಲಿ ಗಾಯಗೊಂಡು ಅಂಗವಿಕತೆಗೊಳಗಾದರೂ, ಎಲ್ಲ ಸವಾಲುಗಳನ್ನು ಎದುರಿಸಿ ಜೀವನವನ್ನು ನಡೆಸುತ್ತಿದ್ದಾರೆ. ಹಲವಾರು ಜನರು ಇಂದಿಗೂ ಸೇವೆ ಸಲ್ಲಿಸುತ್ತಿದ್ದಾರೆ. ಯುದ್ಧದಲ್ಲಿನ ಗಾಯಾಳುಗಳ ಬೆಳಗಾವಿಯಲ್ಲಿನ ಈ ಕಾರ್ಯಕ್ರಮವು ಖಂಡಿತವಾಗಿಯೂ ಯಶಸ್ವಿಯಾಗಲಿದೆ. ಯೋಧರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲಾಗುವುದು. ಗಾಯಾಳು ಯೋಧರ ಸಮಸ್ಯೆಗಳನ್ನು ಪರಿಹರಿಸಲು 24 ಗಂಟೆಗಳ ತುರ್ತು ಸಹಾಯವಾಣಿಯನ್ನು ಆರಂಭಿಸಲಾಗಿದೆ.
ಅವಶ್ಯಕತೆಯುದ್ದಾಗ ದೇಶದ ಯಾವುದೇ ಭಾಗದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ಮಾಜಿ ಸೈನಿಕ ವಿಭಾಗವು ಸದಾ ಸಿದ್ಧವಿದೆ. ಇನ್ನು ಯಾವುದೇ ದಾಖಲೆಗಳನ್ನು ಪಡೆಯಲು ಕೂಡ ಯುದ್ಧದಲ್ಲಿ ಗಾಯಗೊಂಡು ಅಂಗವಿಕಲತೆಗೆ ಒಳಗಾದ ಹರಿಯಾಣಾ ಮೂಲದ ಸದ್ಯ ನಾಶಿಕನಲ್ಲಿರುವ ಮಾಜಿ ಯೋಧ ನಾಯಕ ದೀಪಚಂದ ಅವರು ಮಾತನಾಡಿ ತಾವು ಆಪರೇಶನ್ ಜಮ್ಮು ಮತ್ತು ಕಾಶ್ಮೀರ, ಆಪರೇಶನ್ ವಿಜಯ ಕಾರ್ಗಿಲ್ ಯುದ್ಧ ಮತ್ತು ಪರಾಕ್ರಮ ಆಪರೇಷನನಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದರು. ಈ ವೇಳೆ ನಡೆದ ಬಾಂಬ್ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಅಂಗವಿಕಲತೆ ಎದುರಾಯಿತು. ಇಂದಿನ ಯುವಕರು ಭಗತಸಿಂಗ್ ರಾಜಗುರು ಮತ್ತು ಸುಖದೇವರಂತೆ ದೇಶಕ್ಕಾಗಿ ಸೆಣಸಾಡಲು ಸಿದ್ಧರಾಗಬೇಕು. ಸೇನೆಗೆ ಸೇರಿ ದೇಶ ಸೇವೆಯನ್ನು ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಯುದ್ಧದಲ್ಲಿ ಗಾಯಗೊಂಡ ವಿವಿಧೆಡೆಯ ಮಾಜಿ ಯೋಧರು ಭಾಗಿಯಾಗಿದ್ಧರು.