ಬೆಂಗಳೂರು

“ನಮ್ಮ ಮೆಟ್ರೋ” ಮಹಿಳೆಯರಿಗೆ ಎಷ್ಟು ಸೇಫ್..​​? ಯುವತಿಯರ ಖಾಸಗಿ ಅಂಗಗಳ ಫೋಟೋ ಮತ್ತು ವಿಡಿಯೋ ಶೂಟ್​

ಬೆಂಗಳೂರು: ನಮ್ಮ ಮೆಟ್ರೋ ಮಹಿಳೆಯರಿಗೆ ಎಷ್ಟು ಸೇಫ್​​? ಅನ್ನೋ ಪ್ರಶ್ನೆ ಎಲ್ಲರಲ್ಲೂ ಆಗಾಗ ಮೂಡುತ್ತದೆ. ಮೆಟ್ರೋ ರೈಲಿನಲ್ಲಿ ಮಹಿಳೆಯರಿಗೆ ಕಾಮುಕರು ಕಿರುಕುಳ ಕೊಡುತ್ತಿರೋ ಘಟನೆಗಳು ಬೆಳಕಿಗೆ ಬರುತ್ತಲೇ ಇವೆ. ಈಗ ಅಂಥದ್ದೇ ಘಟನೆಯೊಂದು ನಮ್ಮ ಮೆಟ್ರೋದಲ್ಲಿ ನಡೆದಿದೆ.

ಹೌದು, ನಮ್ಮ ಮೆಟ್ರೋದಲ್ಲಿ ಮಹೇಶ್​ ಎಂಬ ಕಾಮುಕ ಯುವತಿಯರ ಖಾಸಗಿ ಅಂಗಗಳ ಫೋಟೋ ತೆಗೆದು ಸಿಕ್ಕಿಬಿದ್ದಿದ್ದಾನೆ. ಈ ಹಿಂದೆಯೂ ಹಲವು ಯುವತಿಯರ ಖಾಸಗಿ ಅಂಗಗಳ ಫೋಟೋ ಮತ್ತು ವಿಡಿಯೋ ಶೂಟ್​ ಮಾಡಿದ್ದಾನೆ.

ಒಂದು ವಾರದ ಹಿಂದೆ ಡಿಸೆಂಬರ್​ 25ನೇ ತಾರೀಕು ಬೆಳಗ್ಗೆ 9 ಗಂಟೆ ಸುಮಾರಿಗೆ ಯುವತಿ ಮೆಜೆಸ್ಟಿಕ್​​ನಿಂದ ಜೆ.ಪಿ ನಗರಕ್ಕೆ ಪ್ರಯಾಣ ಬೆಳೆಸಿದ್ದರು. ಈ ಸಂದರ್ಭದಲ್ಲಿ ಮಹೇಶ್​ ಎಂಬ ಕಾಮುಕ ಯುವತಿ ಫೋಟೋ, ವಿಡಿಯೋ ತೆಗೆದಿದ್ದಾನೆ. ವಿಷಯ ತಿಳಿದು ಸಿಟ್ಟಿಗೆದ್ದ ಯುವತಿ ಆತನ ಕಪಾಳಕ್ಕೆ ಬಾರಿಸಿದ್ದಾಳೆ. ಇದೇ ವೇಳೆ ಡ್ಯೂಟಿ ಮುಗಿಸಿ ಮನೆ ಕಡೆ ಹೊರಟಿದ್ದ ಮೆಟ್ರೋ ಸಿಬ್ಬಂದಿ ಯುವತಿ ನೆರವಿಗೆ ಧಾವಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button