ಕಲಬುರ್ಗಿ

ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಯುವ ರೈತ ಆತ್ಮಹತ್ಯೆ.

ಕಲಬುರ್ಗಿ: ಸಾಲಬಾಧೆ ತಾಳಲಾರದೆ ಮರಕ್ಕೆ ನೇಣು ಬಿಗಿದುಕೊಂಡು ಯುವ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಳಗಿ ಪೊಲೀಸ್ ಠಾಣೆ ವ್ಯಾಪ್ತಿಯ ಹುಳಿಗೇರಾ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.

ಪ್ರಕಾಶ ರಟಕಲ್ ಬ್ಯಾಂಕಿನಿಂದ ಕೃಷಿ ಚಟುವಟಿಕೆಗಾಗಿ 80 ಸಾವಿರ ರೂ. ಮತ್ತು ಖಾಸಗಿಯಾಗಿ 5 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಇನ್ನೂ ಕೈಕೊಟ್ಟ ಬೆಳೆ, ಸಾಲ ತೀರಿಸಲು ಆಗದೇ ತನ್ನದೇ ಜಮೀನಿನ ಮರಕ್ಕೆ  ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹುಳಿಗೇರಾ ಗ್ರಾಮದ ನಿವಾಸಿ ಪ್ರಕಾಶ ರವೀಂದ್ರ ಜಮದಾರ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಪ್ರಕಾಶ ಗುರುವಾರ ರಾತ್ರಿ 9 ಗಂಟೆಯಾದರೂ ಮನೆಗೆ ಬಂದಿಲ್ಲ ಎಂದು ಹುಡುಕುತ್ತಿದ್ದಾಗ ಹಿಪ್ಪರಗಿ ಗ್ರಾಮದ ಮಾರ್ಗದಲ್ಲಿರುವ ತನ್ನ ಕೃಷಿ ಜಮೀನಿನ ಮರಕ್ಕೆ ನೇಣು ಹಾಕಿಕೊಂಡುಆತ್ಮಹತ್ಯೆಗೆ ಶರಣಾಗಿದ್ದಾರೆ.

Leave a Reply

Your email address will not be published. Required fields are marked *

Back to top button