Uncategorized
ಹಾಪುರದ ಗರ್ಮುಕ್ತೇಶ್ವರದಲ್ಲಿ ಗಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ….!

ಹಾಪುರ: ಹಾಪುರದ ಗರ್ಮುಕ್ತೇಶ್ವರದಲ್ಲಿ 27 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಗಂಗಾ ನದಿಗೆ ಹಾರಿದ್ದಾಳೆ.
ಆಕೆ 70 ಅಡಿ ಎತ್ತರದಿಂದ ಮೇಲ್ಸೇತುವೆಯಿಂದ ನದಿಗೆ ಹಾರುತ್ತಿದ್ದಾಗ, ಡೈವರ್ಗಳು ಆಕೆಯನ್ನು ಗಮನಿಸಿದ್ದಾರೆ. ಸಮಯ ವ್ಯರ್ಥ ಮಾಡದೆ ತಕ್ಷಣ ಡೈವರ್ಗಳು ದೋಣಿಯಲ್ಲಿ ಆಕೆ ಬಿದ್ದ ಸ್ಥಳವನ್ನು ತಲುಪಿ ಆಕೆಯನ್ನು ರಕ್ಷಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಯುವತಿ ಹೇಳಿದ್ದಾಳೆ.
ಜನವರಿ 16ರಂದು ಆಕೆ ಮದುವೆಯಾಗಬೇಕಿತ್ತು. ಆದರೆ, ಕೌಟುಂಬಿಕ ಭಿನ್ನಾಭಿಪ್ರಾಯದಿಂದಾಗಿ ಮದುವೆಗೂ ಮುನ್ನ ಆತ್ಮಹತ್ಯೆ ಮಾಡಿಕೊಳ್ಳಲು ಆಕೆ ನಿರ್ಧರಿಸಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.