ಕಿತ್ತೂರು
ಚಿಕ್ಕ ಅಂಗಡಿಯಲ್ಲಿ ಚಹಾ ಸೇವಿಸಿ ಸರಳತೆ ಮೆರೆದ ಸಚಿವ ಸತೀಶ ಸಾಹುಕಾರ

ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿ ಬಳಿಯ ಚಿಕ್ಕದಾದ ಚಹಾ ಅಂಗಡಿಯಲ್ಲಿ ಚಹಾ ಸೇವಿಸುವ ಮೂಲಕ ಮತ್ತೊಮ್ಮೆ ಸರಳತೆಯ ಸಾಹುಕಾರ ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಸಾಭೀತು ಪಡಿಸಿದ್ದಾರೆ.
ನಿನ್ನೆ ಸಂಜೆ ಬೆಳಗಾವಿ ಜಿಲ್ಲಾ ಉಸ್ತುವಾರಿಯಾದ ಸತೀಶ್ ಜಾರಕಿಹೊಳಿ ಅವರು ಎಂ ಕೆ ಹುಬ್ಬಳ್ಳಿಯ ಮಾರ್ಗವಾಗಿ ಬೆಳಗಾವಿಗೆ ಹೋಗುವಾಗ ಒಂದು ಸಣ್ಣ ಟೀ ಸ್ಟಾಲನಲ್ಲಿ ಚಹಾ ಕುಡಿದು ಸರಳತೆಯ ಸಾಹುಕಾರ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ
ಎಂ.ಕೆ. ಹುಬ್ಬಳ್ಳಿ ಎನ್‌ಹೆಚ್4 ಹೈವೇ ಪಕ್ಕದಲ್ಲಿ ಇರುವಂತಹ ಟೀ ಸ್ಟಾಲಿನಲ್ಲಿ ತಮ್ಮ ಅಭಿಮಾನಿಗಳ ಜೊತೆ ಕುಳಿತು ಬಿಸಿಬಿಸಿಯಾದ ಚಹಾ ಕೂಡಿ ಕೆಲವು ಕ್ಷಣ ತಮ್ಮ ಅಭಿಮಾನಿಗಳ ಜೊತೆ ಕಾಲ ಕಳೆದು ಹೋಗಿದ್ದಾರೆ.