ಬೆಳಗಾವಿ

ಸಿ ಐ ಟಿ ಯು ದಿಂದ ಮಾರ್ಚ್ 3 ರಿಂದ 7 ರವರೆಗೆ ಬೆಂಗಳೂರು ಚಲೋ ಮುಷ್ಕರ.

ಬೆಳಗಾವಿ: ಅಂಗನವಾಡಿ ಸೇರಿದಂತೆ ವಿವಿಧ ಸಂಘಟಿತ ಅಸಂಘಟಿತ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮಾರ್ಚ್ 3 ರಿಂದ 7 ರವರೆಗೆ ಬೆಂಗಳೂರು ಚಲೋ ಮುಷ್ಕರ ಹಮ್ಮಿಕೊಂಡಿದ್ದಾರೆ

ಸಿಐಟಿಯು ರಾಜ್ಯ ಸಮಿತಿಯ ಕರೆಯ ಮೇರೆಗೆ ಹಮ್ಮಿಕೊಳ್ಳಲಾಗಿರುವ ಈ ಮುಷ್ಕರವು ಮಾರ್ಚ್ 3 ರಿಂದ 7 ರವರೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿದೆ ಎಂದು ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಿಐಟಿಯು ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿ.ಎಂ ದಿನೇಖಾನ್ ಅವರು, ಸಂಘಟಿತ ಸಂಘಟಿತ ನೌಕರರಿಗೆ ಸರಿಯಾದ ಕನಿಷ್ಠ ವೇತನ ವಿಲ್ಲ ಸೌಲಭ್ಯಗಳು ಇಲ್ಲ ಬೇಡಿಕೆಗಳು ಹಾಗೆ ಉಳಿದಿವೆ

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಮಾರ್ಚ್ 3ರಂದು ಗ್ರಾಮ ಪಂಚಾಯಿತಿ ನೌಕರರು, 4 ರಂದು ಬಿಸಿಯೂಟ ನೌಕರರು,5 ರಂದು ಕಟ್ಟಡ ಕಾರ್ಮಿಕರು,6 ರಂದು ಅಸಂಘಟಿತ ಸಂಘಟಿತ ನೌಕರರು ಹಾಗೂ7,8 ಮತ್ತು 9 ರಂದು ಅಂಗನವಾಡಿ ನೌಕರರು ತಮ್ಮ ವಿವಿಧ ಬೇಡಿಕೆಗಳಗಾಗಿ ಮುಷ್ಕರ ನಡೆಸುವರು ಎಂದರು

ಅಂಗನವಾಡಿ ನೌಕರರಿಗೆ ಗ್ರಾಚುಟಿ ಕೊಡಬೇಕೆಂದು ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 2023 ಏಪ್ರಿಲ್ ಇಂದ ಕೊಡಬೇಕಾಗಿತ್ತು ಇದುವರೆಗೂ ಕೊಟ್ಟಿಲ್ಲ ಆದ್ದರಿಂದ ಆ ಸಮಯದಿಂದ ನಿವೃತ್ತರಾಗಿರುವ ಎಲ್ಲರಿಗೂ ಗ್ರಾಚುಟಿಯನ್ನು ಶೀಘ್ರವೇ ಬಿಡುಗಡೆಗೊಳಿಸಬೇಕು. ಗ್ರಾಹಕ ಬೆಲೆ ಸೂಚ್ಯಂಕದ ಪ್ರಕಾರ ಕನಿಷ್ಠ 26 ಸಾವಿರ ಈತನ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶವಿದೆ.

ಇಲ್ಲದಿದ್ದರೆ ರಾಜ್ಯ ಸರ್ಕಾರ ತಾನೇ ಹೇಳಿದ ಹಾಗೆ 15 ಸಾವಿರ ವೇತನವನ್ನಾದರೂ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ನಡೆಯಲಿದ್ದು ಬೆಳಗಾವಿ ಜಿಲ್ಲೆಯಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಅವರು ಕರೆ ನೀಡಿದರು

ಅಂಗನವಾಡಿ ಕಾರ್ಯಕರ್ತೆಯೊಬ್ಬರು ಪ್ರತಿಕ್ರಿಯೆ ನೀಡಿ, 2018 ರಿಂದ ಕೇಂದ್ರ ಸರ್ಕಾರ ನಮ್ಮ ವೇತನ ಪರಿಷ್ಕರಣೆ ಮಾಡಿಲ್ಲ ಕನಿಷ್ಠ ವೇತನ ನೀಡಬೇಕು ಅಂಗನವಾಡಿಗಳಲ್ಲಿ ಲ್‌ಕೆಜಿ ಯುಕೆಜಿ ಆರಂಭಿಸಬೇಕು ನಮ್ಮ ಮೇಲಿನ ಕೆಲಸದ ಒತ್ತಡವನ್ನು ಕಡಿಮೆ ಮಾಡಬೇಕು ಸರಿಯಾದ ಆಹಾರ ಪದಾರ್ಥಗಳನ್ನು ಹಾಗೂ ಗುಣಮಟ್ಟದ ಮೊಬೈಲ್ ಗಳನ್ನು ನೀಡಬೇಕು ನೌಕರರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಬೇಕು ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ನಾವು ಬೆಂಗಳೂರಿನ ಮುಷ್ಕರದಲ್ಲಿ ಭಾಗವಹಿಸಲಿದ್ದೇವೆಂದು ಹೇಳಿದರು

ಈ ಸಂದರ್ಭದಲ್ಲಿ ಸಿಐಟಿಯು ಪದಾಧಿಕಾರಿಗಳು ಅಂಗನವಾಡಿ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button