ಪುಂಡಾಟಿಕೆ ಮೆರೆದವರನ್ನು ಗಡಿ ಪಾರು ಮಾಡಿ ; ಸಚಿವ ರಾಮಲಿಂಗಾರೆಡ್ಡಿ

ಬೆಳಗಾವಿ: ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪುಂಡಾಟಿಕೆ ಮೆರೆಯುವವರನ್ನು ಗಡಿಪಾರು ಮಾಡಬೇಕು. ಎರಡು ರಾಜ್ಯಗಳಲ್ಲಿಯೂ ಬಸ್ಸುಗಳಿಗೆ ಕಪ್ಪು ಮಸಿ ಬಳಿಯುವುದು ತಪ್ಪು ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡಿದರು. ಬೆಳಗಾವಿಯಲ್ಲಿ ಬಸ್ ಕಂಡಕ್ಟರ್ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯುವಕನ ಹೆಸರಿಗೆ ಉಚಿತ ಟಿಕೇಟ್ ಪಡೆದಾಗ ಭಾಷೆಯ ಸಮಸ್ಯೆಯಿಂದ ವಾದವಿವಾದ ನಡೆದು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಲಾಗಿದೆ. ಈ ರೀತಿ ಪುಂಡಾಟಿಕೆ ಮಾಡಬೇಕೆಂದರು. ಅಲ್ಲದೇ ಈ ಕುರಿತು ಗೃಹ ಸಚಿವರೊಂದಿಗೆ ಮಾತನಾಡುವುದು ಎಂದರು.
ಇನ್ನು ಬೆಳಗಾವಿಯಲ್ಲಿನ ಮರಾಠಿಗರ ಮಾತೃಭಾಷೆಯಾದರೂ, ಅದರೊಂದಿಗೆ ಕನ್ನಡವನ್ನು ಕಲಿಯಬೇಕು. ಕನ್ನಡ ನಮ್ಮ ರಾಜ್ಯದ ಆಡಳಿತ ಭಾಷೆ ಎಂದರು. ನೆಲ ಜಲ ಮತ್ತು ನಾಡು ನುಡಿಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಇಂತಹ ಘಟನೆಗಳನ್ನು ಖಂಡಿಸಬೇಕು ಎಂದರು. ಇನ್ನು ಬಸ್ಸುಗಳಿಗೆ ಕಪ್ಪುಮಸಿ ಬಳಿಯುವುದು ಎರಡು ರಾಜ್ಯದಲ್ಲಿಯೂ ತಪ್ಪು. ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.