ಸೆಂಚುರಿ ಸ್ಟಾರ್ ಕಳ್ಳ ಪ್ರಸಾದ್ ಬಾಬು ಅರೆಸ್ಟ್.. ಸುಮಾರು 1.45 ಕೋಟಿ ಮೌಲ್ಯದ 100 ಬೈಕ್ ವಶಕ್ಕೆ..!

ಬೆಂಗಳೂರು: ಬೈಕ್ ಕಳ್ಳತನ ಮಾಡೋದ್ರಲ್ಲಿ ಸೆಂಚುರಿ ಬಾರಿಸಿದ ಖದೀಮ. ಮೂರು ವರ್ಷದಲ್ಲಿ ನೂರು ಬೈಕ್ ಕಳ್ಳತನ ಮಾಡಿದ ಸೆಂಚುರಿ ಸ್ಟಾರ್ ಕಳ್ಳನ ಆಂಧ್ರದ ಬಂಗಾರುಪಾಳ್ಯಂನ ನಿವಾಸಿ ಪ್ರಸಾದ್ ಬಾಬು ಬಂಧಿಸಿದ ಕೆ.ಆರ್ ಪುರಂ ಪೊಲೀಸರು.
ದುಬಾರಿ ಬೆಲೆಯ ಬೈಕ್ ಗಳನ್ನೆ ಟಾರ್ಗೆಟ್ ಮಾಡಿ ಕಳ್ಳತನ. ಡೈಲಿ ಸಂಜೆ ಬಸ್ ನಲ್ಲಿ ಬೆಂಗಳೂರಿಗೆ ಬರುತ್ತಿದ್ದ ಆರೋಪಿ. ಕೆ.ಆರ್ ಪುರಂ, ಟಿನ್ ಫ್ಯಾಕ್ಟರಿ, ಮಹದೇವಪುರ ಜನವಸತಿ ಪ್ರದೇಶಗಳಲ್ಲಿ ಮನೆ ಮುಂದೆ ನಿಲ್ಲಿಸಿದ ಬೈಕ್ ಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ. ಬಂದ ದಿನವೇ ಬೈಕ್ ಕದ್ದು, ಅದೇ ಬೈಕ್ ನಲ್ಲಿ ಊರಿಗೆ ಎಸ್ಕೇಪ್.
ಕದ್ದ ಬೈಕ್ ಗಳನ್ನ 15-20 ಸಾವಿರಕ್ಕೆ ಆಂಧ್ರದಲ್ಲಿ ಮಾರಾಟ. ಬಂದ ಹಣದಲ್ಲಿ ಮೋಜು ಮಸ್ತಿ ಮಾಡ್ತಿದ್ದ ಆರೋಪಿ. ಕೆ ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 25 ಬೈಕ್ ಕದ್ದಿದ್ದ ಆರೋಪಿ. ಆರೋಪಿ ಬಳಿ 20 ರಾಯಲ್ ಎನ್ಫೀಲ್ಡ್ ಬೈಕ್, 30 ಫಲ್ಸರ್ ಬೈಕ್, 40 ಆಕ್ಸಿಸ್ ಹಾಗೂ ಇತರೆ ವಾಹನಗಳು ವಶಕ್ಕೆ. ಕೆ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.!