Uncategorized
ಲಿಂಗಾಯತ ಸಂಸ್ಥೆಗಳ ಸಹಯೋಗದಲ್ಲಿ “ವಚನ ದರ್ಶನ ಸತ್ಯ ವರ್ಸಸ್ ಮಿಥ್ಯ” ಗ್ರಂಥ ಬಿಡುಗಡೆ ಮಾಡಿದ ಸಚಿವ ಎಂ.ಬಿ.ಪಾಟೀಲ.

ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ವೀರಶೈವ ಮಹಾಸಭಾ ಮತ್ತಿತರ ಲಿಂಗಾಯತ ಸಂಸ್ಥೆಗಳ ಸಹಯೋಗದಲ್ಲಿ ಬಸವ ಸಮಿತಿಯಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು “ವಚನ ದರ್ಶನ ಸತ್ಯ ವರ್ಸಸ್ ಮಿಥ್ಯ” ಗ್ರಂಥ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶ್ರೀ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ತರಳಬಾಳು ಪೀಠದ ಸಾಣೆಹಳ್ಳಿ ಶಾಖಾಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗಳು, ಬಸವಲಿಂಗ ಪಟ್ಟದೇವರು ಸ್ವಾಮೀಜಿ, ಗಂಗಾ ಮಾತಾಜಿ, ಗೊ.ರು.ಚನ್ನಬಸಪ್ಪ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ, ಎಸ್.ಎಂ.ಜಾಮದಾರ್, ಶಂಕರ ಬಿದರಿ ಮತ್ತಿತರರು ಈ ಸಂದರ್ಭದಲ್ಲಿ ಇದ್ದರು.