ಸತೀಶ್ ಜಾರಕಿಹೊಳಿ ನಿವಾಸಕ್ಕೆ ಡಿಕೆ ಸುರೇಶ್ ಭೇಟಿ – ಕುತೂಹಲ ಮೂಡೊಸಿದ ಉಭಯ ನಾಯಕರ ವಿಸಿಟ್.

ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಮಾಜಿ ಸಂಸದ ಡಿಕೆ ಸುರೇಶ್ ಭೇಟಿಯಾಗಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಸರ್ಕಾರಿ ನಿವಾಸದಲ್ಲಿ ಉಭಯ ನಾಯಕರು ಭೇಟಿಯಾಗಿದ್ದಾರೆ. ಈ ಇಬ್ಬರೂ ನಾಯಕರ ಈ ಭೇಟಿ ಕುತೂಹಲಕ್ಕೆ ಕಾರಣವಾಗಿದೆ .
ಕೆಲವು ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂದು ಸ್ವತಃ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದರು. ಆ ವೇಳೆ ಡಿಕೆ ಸಹೋದರರು ಮತ್ತು ಜಾರಕಿಹೊಳಿ ನಡುವೆ ತಿಕ್ಕಾಟ ಉಂಟಾಗಿತ್ತು. ಆದ್ರೆ ಈಗ ಇಬ್ಬರೂ ನಾಯಕರು ಭೇಟಿಯಾಗಿದ್ದು, ರಾಮನಗರದ ಅಭಿವೃದ್ಧಿ ಬಗ್ಗೆ ಮಾನ್ಯ ಸಚಿವರನ್ನ ಭೇಟಿಯಾಗಲು ಬಂದಿದ್ದೆ, ಸಾಮಾನ್ಯವಾಗಿ ನಾನು ಸತೀಶ್ ಅವರ ಮನೆಗೆ ಬರ್ತಾ ಇರ್ತಿನಿ.
ಇದು ಹೊಸದೇನಲ್ಲ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚೆಗೆ ಬಂದಿದ್ದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಈ ಭೇಟಿ ನನ್ನ ಅವರ ವೈಯಕ್ತಿಕ ಭೇಟಿ ಅಷ್ಟೇ.ಪಕ್ಷದ ಒಳಜಗಳ ಬಿಟ್ಟು ಒಟ್ಟುಗೂಡಿಸುವ ವಿಚಾರದ ಬಗ್ಗೆ ಹಿರಿಯ ನಾಯಕರು ಗಮನ ನೀಡಲಿದ್ದಾರೆ.ಪಕ್ಷದ ಹಿರಿಯ ಮುಖಂಡರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.
ಇನ್ನು ಡಿ.ಕೆ.ಸುರೇಶ್ ಜೊತೆಗಿನ ಚರ್ಚೆ ಬಳಿಕ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಸಾಮಾನ್ಯವಾಗಿ ಅವ್ರು ಮನೆಗೆ ಬರ್ತಿರ್ತಾರೆ .ಈ ಭೇಟಿ ಏನು ಹೊಸದೇನಲ್ಲ.ಎಲ್ರು ಬರ್ತಾರೆ, ಹಾಗೆ ಡಿ.ಕೆ.ಸುರೇಶ್ ಕೂಡಾ ಪ್ರತಿ ಬಾರಿ ಬರ್ತಿದ್ರು,ಈ ಬಾರಿ ಕೂಡಾ ಸಾಮಾನ್ಯವಾಗಿ ಭೇಟಿ ನೀಡಿದ್ದಾರೆ ಎಂದಿದ್ದಾರೆ.ಇನ್ನು ಪಕ್ಷದ ಒಳಜಗಳ ಮತ್ತು ಪಕ್ಷದ ಒಟ್ಟುಗೂಡಿಸುವ ಬಗ್ಗೆ ಚರ್ಚೆ ವಿಚಾರಕ್ಕೆ ಸಂಬಂಧಪಟ್ಟಂತೆ ಎಲ್ಲರೂ ಒಟ್ಟಾಗಿಯೇ ಇದ್ದಿವಿ ಕೆಲಸ ಕೊಟ್ಟಾಗ ಒಟ್ಟಾಗಿಯೇ ಮಾಡ್ತಿವಿ ಎಂದು ಸತೀಶ್ ಜಾರಕಿಹೊಳೆ ಹೇಳಿದ್ದಾರೆ.