ಮಾ.31 ರಂದು ಕೆಎಲ್ಎಸ್ ಐಎಂಇಆರ್ ಸಂಸ್ಥೆಯ ಮೂರನೇ ಸ್ನಾತಕೋತ್ತರ ಪದವಿ ಪ್ರದಾನ ಕಾರ್ಯಕ್ರಮ.

ಬೆಳಗಾವಿ: ಕರ್ನಾಟಕ ಲಾ ಸೊಸೈಟಿ ಕೆಎಲ್ಎಸ್ ಐಎಂಇಆರ್ ಸಂಸ್ಥೆಯ ಮೂರನೇ ಪದವಿ ಸ್ನಾತಕೋತ್ತರ ಪದವಿ ಪ್ರಧಾನ ಸಮಾರಂಭವನ್ನು ಮಾ.31 ರಂದು ಐಎಂಇಆರ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಆರ್.ಎಸ್.ಮುತಾಲಿಕ ತಿಳಿಸಿದರು.
ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕರ್ನಾಟಕ ಲಾ ಸೊಸೈಟಿ ಕಳೆದ 2020ರಲ್ಲಿ ಶೈಕ್ಷಣಿಕ ಸ್ವಾಯತ್ತತೆ ಪಡೆದ ಈ ಸಂಸ್ಥೆ ಶಿಕ್ಷಣದಲ್ಲಿ 34 ವರ್ಷಗಳ ಶ್ರೇಷ್ಠತೆ ಹೊಂದಿದೆ ಎಂದರು.
ಕರ್ನಾಟಕ ಲಾ ಸೊಸೈಟಿಯ ಅಧ್ಯಕ್ಷ ಅನಂತ ಮಂಡಗಿ ಅಧ್ಯಕ್ಷತೆ ವಹಿಸಲಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ್ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗೋವಾದ ಇನ್ಸ್ಟಿಟ್ಯೂಟ್ ಆಫ್ ಮ್ಯಾನೆಜ್‌ಮೆಂಟ್ ನಿರ್ದೇಶಕ ಪ್ರೊ.ಅಜಿತ್ ಪಾರುಲೆಕರ್ ಮುಖ್ಯ ಭಾಷಣ ಮಾಡಲಿದ್ದಾರೆ ಕೆಎಲ್ಎಸ್ ಬೋಡ್೯ ಆಫ್ ಮ್ಯಾನೆಜ್‌ಮೆಂಟ್ ಅಧ್ಯಕ್ಷ ಪ್ರದೀಪ್ ಸಾವ್ಕರ್, ಎಸ್.ವಿ.ಗಣಾಚಾರಿ ಭಾಗವಹಿಸಲಿದ್ದಾರೆ ಎಂದರು.
2022-24 ಬ್ಯಾಚ್ ನ ಟಾಪ್ 10 ರ್ಯಾಂಕ್ ಹೋಲ್ಡರ್ ಗಳಿಗೆ ಶೈಕ್ಷಣಿಕ ಶ್ರೇಷ್ಠತೆಗೆ ಪದಕಗಳು ಹಾಗೂ ಪ್ರಮಾಣ ಪತ್ರವನ್ನು ಪ್ರಧಾನ ಮಾಡಲಾಗುತ್ತಿದೆ ಎಂದರು.ಕೆಎಲ್ಎಸ್ ಕಾರ್ಯದರ್ಶಿ ವಿವೇಕ ಕುಲಕರ್ಣಿ, ಕೆಎಲ್ಎಸ್ ನಿರ್ದೇಶಕ ಡಾ. ಆರೀಫ್ ಶೆಖ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.