ರಾಯಬಾಗ
ಹೆಲ್ಮೆಟ್ ಹಾಕಿಲ್ಲ ಫೈನ್ ಕಟ್ಟಿ ಎಂದಿದ್ದಕ್ಕೆ ಸಾಹುಕಾರ್ ಹೆಸರು ಹೇಳಿದ ವ್ಯಕ್ತಿಗಳು.

ರಾಯಭಾಗ : ರಸ್ತೆಯ ಮೇಲೆ ಹೆಲ್ಮೆಟ್ ಇಲ್ಲದೇ ಓಡಾಡೋರಿಗೆ ಅಸ್ತ್ರವಾಯ್ತಾ “ಸಾಹುಕಾರ್ “ ಪದ? ಹೆಲ್ಮೆಟ್ ಹಾಕಿಲ್ಲ ಫೈನ್ ಕಟ್ಟಿ ಎಂದಿದ್ದಕ್ಕೆ ಸಾಹುಕಾರ್ ಹೆಸರು ಹೇಳಿದ ವ್ಯಕ್ತಿಗಳು.
ಡ್ಯೂಟಿಮೇಲಿದ್ದ ಪಿಎಸ್ಐಗೆ ಸಾಹುಕಾರ್ ಭಯ ತೋರಿಸಿದ ವಿಠ್ಠಲ್ ಲಗಳಿ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೂಗೇರಿಯಲ್ಲಿ ಘಟನೆ ನಡೆದಿದ್ದು. ಹಾರೂಗೇರಿ ಠಾಣೆ ಶಿವಾನಂದ ಕಾರಜೋಳ ಅವರು ಕೆಪಿ ಆಕ್ಟನಡಿ ಕೇಸ್ ಹಾಕುತ್ತೆನೆ ಎಂದಾಗ . ಜಾತಿನಿಂದನೆ ಕೇಸ್ ಹಾಕ್ತಿನಿ ಅಂತ ಪಿಎಸ್ಐಗೆ ಮರಳಿ ಅವಾಜ್ ಹಾಕಿದ್ದಾನೆ ಈ ಭೂಪ. ಬಾಡಿ ಕ್ಯಾಮರಾ ಹಾಕಿದ್ದ ಪಿಎಸ್ಐ ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ ಆಸಾಮಿ ವಿಠ್ಠಲ್.ಸಾಹುಕಾರ್ ಹೆಸರು ಹೇಳಿಕೊಂಡು ರೂಲ್ಸ್ ಬ್ರೇಕ್ ಮಾಡೋದು ಎಷ್ಟು ಸರಿ ಎನ್ನುತ್ತಿರುವ ಸಾರ್ವಜನಿಕರು