Uncategorized

ರಾಜ್ಯದಲ್ಲಿ ಬೀಸಲಿದೆ ಸಿಎಂ ಬದಲಾವಣೆ ಗಾಳಿ… ಮಾಜಿ ಸಚಿವ ಶ್ರೀರಾಮುಲು ಸ್ಫೋಟಕ ಹೇಳಿಕೆ.

ಮೈಸೂರ :ಬಿಜೆಪಿ ಹೈಕಮಾಂಡ್ ಭಿನ್ನಮತಗಳನ್ನು ಶಮಗೊಳಿಸಲು ಗಟ್ಟಿಯಾಗಿದೆ. ಆದರೇ ರಾಜ್ಯದಲ್ಲಿ ಸಿಎಂ ಬದಲಾವಣೆ ಗಾಳಿ ಬೀಸಲಿದೆ ಎಂಬ ಸ್ಫೋಟಕ ಹೇಳಿಕೆಯನ್ನು ಪರೋಕ್ಷವಾಗಿ ಮಾಜಿ ಸಚಿವ ಶ್ರೀರಾಮುಲು ನೀಡಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣ ನಿಂತ ನೀರಲ್ಲ. ಹರಿಯುತ್ತಿರುವ ನೀರಿದಂತೆ. ಹಲವಾರು ಜನರು ಇದರಲ್ಲಿ ಬಂದು-ಹೋಗುತ್ತಾರೆ. ರಾಜ್ಯದಲ್ಲಿ ಅನೇಕ ದಿಗ್ಗಜರು ವಿರೇಂದ್ರ ಪಾಟೀಲ್, ದೇವರಾಜ್ ಅರಸ್ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಬದಲಾವಣೆಯ ಗಾಳಿ ಬೀಸಿತ್ತು. ಮಹಾರಾಷ್ಟ್ರದಲ್ಲಿಯೂ ಇತ್ತಿಚೆಗೆ ಅಂತಹ ಬದಲಾವಣೆಯನ್ನು ಕಾಣಬಹುದಾಗಿದೆ. ಈಗ ರಾಜ್ಯದಲ್ಲಿಯೂ ಬೆಳವಣಿಗೆಗಳು ನಡೆಯಬಹುದಾಗಿದೆ.

ಮಹಾರಾಷ್ಟ್ರದಲ್ಲಿ ಶಿಂಧೆ ಸರ್ಕಾರಕ್ಕೆ ಬಂದ ಪರಿಸ್ಥಿತಿ ಕರ್ನಾಟಕದಲ್ಲಿಯೂ ಉಂಟಾಗಬಹುದು. ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಕೇವಲ ರಾಜಕೀಯ ಅಧಿಕಾರಕ್ಕಾಗಿ ಸೆಣಸಾಟ ಆರಂಭವಾಗಿದೆ. ಮಹಾಆಘಾಡಿಯ ಪರಿಸ್ಥಿತಿಯನ್ನು ಅವಲೋಕಿಸಬೇಕಾಗಿದೆ ಎಂದರು.

ಬಿಜೆಪಿಯಲ್ಲಿನ ಭಿನ್ನಮತವನ್ನು ಹೈಕಮಾಂಡ ಬಗೆಹರಿಸಲಿದೆ. ಯತ್ನಾಳ ಒಬ್ಬ ಒಳ್ಳೆಯ ನಾಯಕರು. ಬಿಜೆಪಿ ಹೈಕಮಾಂಡ್ ವೀಕ್ ಆಗಿಲ್ಲ. ಅವರು ಎಲ್ಲವನ್ನು ಬಗೆಹರಿಸುತ್ತಾರೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button