ಸೈಕಲ್ ಏರಿ ಜನರ ಮನೆ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಿದ ಶಾಸಕ ಅಭಯ್ ಪಾಟೀಲ್.

ಬೆಳಗಾವಿ: ತಮ್ಮದೇಯಾದ ವಿಶಿಷ್ಟತೆಗೆ ಖ್ಯಾತಿಯಾದ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಇಂದು ಸೈಕಲ್ ತುಳಿದ ಜನರ ಮನೆ ಬಾಗಿಲಿಗೆ ಹೋಗಿ ಸಮಸ್ಯೆಗಳನ್ನು ಆಲಿಸಿದರು.
ಹೌದು, ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲರು ಇಂದು ಸೈಕಲ್ ಫೇರಿ ಮೂಲಕ ವಿಶೇಷ ಅಭಿಯಾನವನ್ನು ನಡೆಸಿದರು. ವಾರ್ಡ ನಂ . 29 ಮತ್ತು 43 ರಲ್ಲಿನ ಜನರ ಮನೆ ಬಾಗಿಲಿಗೆ ಹೋದ ಶಾಸಕರು ಜನರ ಸಮಸ್ಯೆಗಳನ್ನು ತಿಳಿದುಕೊಂಡರು.
ಈ ವೇಳೆ ಜನರು ಸಂಚಾರ ದಟ್ಟಣೆಯ ಜೊತೆಗೆ ತ್ಯಾಜ್ಯ ವಿಲೇವಾರಿಯನ್ನು ಸರಿಯಾಗಿ ಮಾಡುತ್ತಿಲ್ಲವೆಂದು ಅಸಮಾಧಾನವನ್ನು ವ್ಯಕ್ತಪಡಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಈ ಕುರಿತು ಶೀಘ್ರದಲ್ಲೇ ಸಭೆ ನಡೆಸಿ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದರು. ಟಿಳವಾಡಿಯಲ್ಲಿಯೂ ಕೂಡ ತ್ಯಾಜ್ಯ ವಿಲೇವಾರಿ ಮಾಡದ ಹಿನ್ನೆಲೆ ಹಲವಾರು ಜನರಿಂದ ದೂರುಗಳು ಕೇಳಿಬಂದವು. ಈ ಸಂದರ್ಭದಲ್ಲಿ ನಗರಸೇವಕಿ ವಾಣಿ ವಿಲಾಸ್ ಜೋಷಿ, ನಿತಿನ್ ಜಾಧವ್, ಜಯಂತ್ ಜಾಧವ್ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.