ಬೆಳಗಾವಿ

ಕಂಡಕ್ಟರ್ ಬೆಂಬಲಕ್ಕೆ ನಿಂತ ಕನ್ನಡಪರ ಹೋರಾಟಗಾರರು ನಾಲಾಯಕ್ ಎಂದಿದ್ದ ಎಂಇಎಸ್ ಪುಂಡನಿಗೆ ಜಾಮೀನು!

ಬೆಳಗಾವಿ: ಕಂಡಕ್ಟರ್ ಬೆಂಬಲಕ್ಕೆ ನಿಂತ ಕನ್ನಡಪರ ಹೋರಾಟಗಾರರನ್ನು ಟೀಕಿಸಿದ್ದ ಎಂಇಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಶುಭಂ ಶೇಳಕೆಗೆ ಜಾಮೀನು ಮಂಜೂರು ಮಾಡಿ ಕೋರ್ಟ್ ಆದೇಶ ನೀಡಿದೆ.

ಫೆಬ್ರವರಿ 23 ರಂದು ಟಿಕೇಟಗೆ ಸಂಬಂಧಿಸಿದಂತೆ ನಡೆದ ಜಗಳದಲ್ಲಿ ಭಾಷಾ ವಿವಾದ ನಡೆದಾಗ ಕಂಡಕ್ಟರ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಎಂಇಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಶುಭಂ ಶೇಳಕೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದರು. ನಡೆದ ಘಟನೆಯನ್ನು ಅವಲೋಕಿಸಿದೇ ಕಂಡಕ್ಟರಗೆ ಬೆಂಬಲಿಸಿ ಎಂದು ಕನ್ನಡಪರ ಸಂಘಟನೆಗಳಿಗೆ ಸಲಹೆ ನೀಡಿದ್ದರು.

ಆದರೇ ಅವರು ಗಡಿಯಲ್ಲಿ ಭಾಷಾ ಕಿಡಿ ಹೊತ್ತಿಸಿ ಪ್ರಚೋದಿಸುವ ಹೇಳಿಕೆ ನೀಡಿದ್ದಾರೆಂದು, ಅವರ ವಿರುದ್ಧ ಮಾಳಮಾರುತಿ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬೆಳಗಾವಿ 2ನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಶುಭಂ ಶೇಳಕೆ ಅವರಿಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿದೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ 192,352,353, 153, 504 ಮತ್ತು 505 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.

ದೂರು ದಾಖಲಾಗುತ್ತಿದ್ದಂತೆ ಶುಭಂ ಶೇಳಕೆ ಮಹಾರಾಷ್ಟ್ರ ಶಿವಸೇನೆ ನಾಯಕರ ಮುಂದೆ ಪ್ರತ್ಯಕ್ಷವಾಗಿ, ಮರಾಠಿಗರ ಮೇಲೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅನ್ಯಾಯ ಆಗ್ತಿದೆ. ಕೇಂದ್ರದ ಗಮನಕ್ಕೆ ತನ್ನಿ ಶಿವಸೇನೆ ಮುಖಂಡ ಸಂಜಯ ರಾವುತ್ ಗೆ ಮನವಿ ಮಾಡಿದ್ದರು.

Related Articles

Leave a Reply

Your email address will not be published. Required fields are marked *

Back to top button