ಸರ್ವಜ್ಞನ ಬಗ್ಗೆ ಪಿಎಚ್’ಡಿ ಮಾಡಿದ ಪ್ರಥಮ ಮತ್ತು ಏಕೈಕ ವ್ಯಕ್ತಿ ಬೆಳಗಾವಿ ಜಿಲ್ಲೆಯ ಅಕಬರ ಅಲಿ; ಡಾ. ಎಂ.ಜಿ.ಆರ್. ಅರಸ್

ಬೆಳಗಾವಿ: ಕಬ್ಬಿನದ ಕಡಲೆಯಾಗಿದ್ದ ಸರ್ವಜ್ಞನ ಬಗ್ಗೆ ಪಿಎಚ್’ಡಿ ಮಾಡಿದ ಪ್ರಥಮ ಮತ್ತು ಏಕೈಕ ವ್ಯಕ್ತಿ ಬೆಳಗಾವಿ ಜಿಲ್ಲೆಯ ಅಕಬರ ಅಲಿ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕರಾದ ಡಾ. ಎಂ.ಜಿ.ಆರ್. ಅರಸ್ ಹೇಳಿದರು.
ಇಂದು ಬೆಳಗಾವಿಯ ಮಹಾಂತ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ತಿನ ರಜತ ಮಹೋತ್ಸವ, ಡಾ. ಎಂ ಅಕಬರ ಅಲಿ ಅವರ ಜನ್ಮ ಶತಮಾನೋತ್ಸವ ಹಾಗೂ ಜಿಲ್ಲಾ ನಾಲ್ಕನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು.
ಡಾ. ಎಂ.ಜಿ.ಆರ್. ಅರಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದ ದಿವ್ಯ ಸಾನಿಧ್ಯವನ್ನು ಬೆಳಗಾವಿ ಕಾರಂಜಿಮಠದ ಶ್ರೀ ಗುರುಸಿದ್ಧ ಸ್ವಾಮಿಜಿಗಳು ವಹಿಸಿದ್ದರು.
ಈ ವೇಳೆ ಕಾರ್ಯಾಧ್ಯಕ್ಷರಾದ ಡಾ. ಸಿ.ಕೆ. ಜೋರಾಪುರ, ಎಸ್.ಎಂ. ಕುಲಕರ್ಣಿ, ವಿ.ಎನ್. ಜೋಶಿ, ಬಾಸೂರು ತಿಪ್ಪೇಸ್ವಾಮೀ, ಅಪ್ಪಾಸಾಹೇಬ್ ಅಲಿಬಾದಿ, ಚಂದ್ರಶೇಖರ ಅಕ್ಕಿ, ಡಾ. ಶಿವಾನಂದ ಬೆಳಕೂಡ, ಮಹೇಶ್ ನಾಯಕ, ಬಸವರಾಜ್ ಗಾರ್ಗಿ, ಎಲ್.ಎಸ್.ಶಾಸ್ತ್ರಿ, ಆನಂದರ ಪುರಾಣಿಕ, ಅನ್ನಪೂರ್ಣ ಹಿರೇಮಠ, ಚಂದ್ರಶೇಖರ ನವಲಗುಂದ, ಅನ್ನಪೂರ್ಣ ಮಳಗಲಿ ಇನ್ನುಳಿದವರು ಉಪಸ್ಥಿತರಿದ್ದರು.
ಅಕಬರ ಅಲಿ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಕನ್ನಡ ಸಾಹಿತಿಗಳಲ್ಲೇ, ಸರ್ವಜ್ಞನ ಬಗ್ಗೆ ಸಂಶೋಧನೆ ಕಬ್ಬಿನದ ಕಡಲೆ ಎಂದು ಯಾರೂ ಕೂಡ ಸಂಶೋಧನೆ ಮಾಡಿರಲಿಲ್ಲ. ಆದರೇ ಕರ್ನಾಟಕದ ಮೈಸೂರು ವಿಶ್ವವಿದ್ಯಾಲಯದಲ್ಲಿ ಸರ್ವಜ್ಞನ ಬಗ್ಗೆ ಪಿಎಚ್’ಡಿ ಮಾಡಿದ ಮೊದಲ ಮತ್ತು ಏಕೈಕ ವ್ಯಕ್ತಿ. ದಿನಕರ ದೇಸಾಯಿಯವರ ಬಳಿಕ ಚುಟುಕು ಸಾಹಿತ್ಯದ ಬೇರುಗಳನ್ನು ಗಟ್ಟಿಯಾಗುವ ಕೆಲಸವನ್ನು ಮಾಡಿದ್ದಾರೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕರಾದ ಡಾ. ಎಂ.ಜಿ.ಆರ್. ಅರಸ್ ಹೇಳಿದರು.
ಈ ಸಂದರ್ಭದಲ್ಲಿ ಚುಟುಕು ಪಾರಿಜಾತ, ಸ್ಮರಣ ಸಂಚಿಕೆ ಬಿಡುಗಡೆ ಇನ್ನುಳಿದ ಕಾರ್ಯಕ್ರಮಗಳು ನಡೆದವು.