ಪ್ರಮೋದ ಮುತಾಲಿಕರಿಗೆ ಶಿವಮೊಗ್ಗ ಜಿಲ್ಲಾ ಪ್ರವೇಶ ನಿರ್ಬಂಧ: ಶ್ರೀರಾಮ ಸೇನೆಯಿಂದ ಪ್ರತಿಭಟನೆ

ಬೆಳಗಾವಿ: ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಶಿವಮೊಗ್ಗ ಜಿಲ್ಲಾ ನಿರ್ಬಂಧ ಉಗ್ರವಾಗಿ ಖಂಡಿಸಿ ಶನಿವಾರ ಶ್ರೀರಾಮ ಸೇನೆಯ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಅಪ್ಪಟ ದೇಶಭಕ್ತ, ಕಳೆದ 50 ವರ್ಷದಿಂದ ದೇಶ ಧರ್ಮಕ್ಕಾಗಿ ಮನೆ ಮಠ ಸಂಸಾರ ತ್ಯಜಿಸಿ ಜೀವನವನ್ನೇ ದೇಶ ಧರ್ಮಕ್ಕೆ ಅರ್ಪಿಸಿದ ವ್ಯಕ್ತಿ. ಅಂತಹ ವ್ಯಕ್ತಿಯನ್ನು ತಮ್ಮ ಸರ್ಕಾರ ಮೇಲಿಂದ ಮೇಲೆ ಸಕಾರಣವಿಲ್ಲದೆ.
ಜಿಲ್ಲಾ ಪ್ರವೇಶ ನಿರ್ಬಂಧ ಮಾಡುತ್ತಿರುವುದು ಸಂವಿಧಾನ.ಪ್ರಜಾಪ್ರಭುತ್ವ ವ್ಯಕ್ತಿ ಸ್ವತಂತ್ರದ ಕಗೊಲೆಯಾಗಿದ್ದು ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.70 ವರ್ಷದ ಹಿರಿಯ ಜೀವಿಯನ್ನು ರಾತ್ರಿ 10 ಗಂಟೆಗೆ ರಸ್ತೆಯಲ್ಲಿ ತಡೆಯುವುದು ಯಾವ ಪುರುಷಾರ್ಥಕ್ಕೆ? ಕೋಮು ಸೂಕ್ಷ್ಮ ಪ್ರದೇಶ,ಮುಗಿದು ಹೋದ ಕೇಸಗಳನ್ನು ಮುಂದುಮಾಡಿ ಪ್ರವೇಶ ನಿರ್ಬಂಧ..
ಹಾಗಾದ್ರೆ ಕೋಮು ಸೂಕ್ಷ್ಮ ಪ್ರದೇಶ ನಿಭಾಯಿಸುವ.ಅವರನ್ನು ಹದ್ದು ಬಸ್ತಿನಲ್ಲಿಡುವಹೆಡೆಮುರಿ ಕಟ್ಟುವ ಸಾಮರ್ಥ್ಯ ಸರ್ಕಾರಕ್ಕೆ ಇಲ್ಲಾ, ಇದೊಂದು ಲಜ್ಜೆಗೆಟ್ಟ ನಡೆ. ತಕ್ಷಣವೇ ಸರ್ಕಾರ ನಿರ್ಬಂಧ ವಾಪಸ್ ಪಡೆದು ಸಂವಿಧಾನ ದತ್ತ ಹಕ್ಕನ್ನು ಎತ್ತಿಹಿಡಿಯಬೇಕೆಂದು ಆಗ್ರಹಿಸಿದರು. ರವಿ ಕೋಕಿತಕರ, ವಿಠ್ಠಲ್ ಗಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.