೨೬ ಸದಸ್ಯರು ತಮ್ಮ ಸದಸ್ಯತ್ವಕ್ಕೆ ಸಾಮುಹಿಕ ರಾಜಿನಾಮೆ.

ಬೆಳಗಾವಿ : ಉಗಾರ ಬುದ್ರುಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಗ್ರಾಮದ ಯಾವುದೇ ಕಾರ್ಯಕ್ಕೆ ಸಹಕಾರ ನೀಡದೆಯಿದಿದ್ದರಿಂದ ಎಲ್ಲ ೨೬ ಸದಸ್ಯರು ತಮ್ಮ ಸದಸ್ಯತ್ವಕ್ಕೆ ಸಾಮುಹಿಕ ರಾಜಿನಾಮೆ ಪತ್ರವನ್ನು ಬೆಳಗಾವಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನೀಡಿದ್ದು, ಎಲ್ಲ ಅಭಿವೃದ್ಧಿ ಕಾರ್ಯಗಳು ಸ್ಥಗೀತಗೊಂಡಿವೆ.
ಕೃಷ್ಣಾ ನದಿ ತೀರದಲ್ಲಿರುವ ಉಗಾರ ಬುದ್ರುಕ ಗ್ರಾಮದಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಗಂಭೀರಗೊಡಿದ್ದು, ನೀರಿನ ಪೂರೈಕೆ ನಿಂತುಹೋಗಿದೆ. ಇದ್ದರಿಂದ “ಶೀತಲ ದಾದಾ ಫೌಂಡೇಶನ” ಇವರ ವತಿಯಿಂದ ೪ ಟ್ಯಾಂಕರ್‌ಗಳ ಮುಖಾಂತರ ಅವಶ್ಯಕತೆಯಿರುವ ಓಣಿಗಳಲ್ಲಿ ನೀರು ಪೂರೈಕೆ ಪ್ರಾರಂಭಿಸಿದ್ದಾರೆ.
ಗ್ರಾಮಾಭಿವೃದ್ಧಿ ಅಧಿಕಾರಿಗಳ ಬಗ್ಗೆ ಈಗಾಗಲೇ ಸದಸ್ಯರು ಪಂಚಾಯಿತಿ ಕಾರ್ಯಕಲಾಪ ಸ್ಥಗೀತಗೊಳಿಸಿ ಅಧಿಕಾರಿಗಳಿಗೆ ಮನವಿ ಅರ್ಪಿಸಿದರು. ಆದರೂ ತಾಲೂಕಾ ಪಂಚಾಯತಿ ಅಧಿಕಾರಿಗಳು ಈ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲಾ. ಸಧ್ಯಕ್ಕೆ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಮಧ್ಯದ ಗುದ್ದಾಟದಿಂದ ಗ್ರಾಮದ ಜನರಿಗೆ ಅನೇಕ ಸಮಸ್ಯೆಗಳಿಗೆ ಎದುರು ಹೋಗಬೇಕಾಗಿದೆ. ಮೇಲಾಧಿಕಾರಿಗಳು ಈ ಸಮಸ್ಯೆಗಳ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ನಿರ್ಣಯ ಕೈಗೊಳ್ಳಬೇಕೆಂದು ಗ್ರಾಮದ ಮುಖಂಡರು, ಪಿಕೆಪಿಎಸ್ ಅಧ್ಯಕ್ಷ ಶೀತಲಗೌಡ ಪಾಟೀಲ ಆರೋಪಿಸಿದ್ದಾರೆ.