ಹಿಡಕಲ್ ನೀರು ಪೂರೈಕೆ: ಟೆಂಡರ್ ರದ್ದಾಗಿ ಕಾಮಗಾರಿ ನಿಲ್ಲಲಿ ನಮ್ಮ ನೀರು ನಮ್ಮ ಹಕ್ಕು ವೇದಿಕೆ ಆಗ್ರಹ.

ಹಿಡಕಲ್ ಜಲಾಶಯದಿಂದ ಧಾರವಾಡದ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳು ತಾತ್ಕಾಲಿಕವಾಗಿ ನಿಲ್ಲಿಸಿದ್ದು ಆದರೆ ಸಂಪೂರ್ಣವಾಗಿ ಕಾಮಗಾರಿ ನಿಲ್ಲಿಸಿ ನೀರು ಪೂರೈಕೆ ಸ್ಥಿತಿಗೊಳಿಸಬೇಕೆಂದು ನಮ್ಮ ನೀರು ನಮ್ಮ ಹಕ್ಕು ಹೋರಾಟ ವೇದಿಕೆ ಆಗ್ರಹಿಸಿದೆ
ಈ ಕುರಿತು ಸೋಮವಾರ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಶಶಾಂಕ್ ನಾಯಕ್ ಅವರು, ವಿವಿಧ ಸಂಘಟನೆಗಳ ಯೋಗದಿಂದ ಹಿಡಿಕಲ್ ಜಲಾಶಯದ ನೀರನ್ನು ಧಾರವಾಡಕ್ಕೆ ಪೂರೈಸುವುದನ್ನು ವಿರೋಧಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಅದರಂತೆ ಇದೀಗ ಜಿಲ್ಲಾಧಿಕಾರಿಗಳು ನೀರು ಪೂರೈಕೆ ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ ಆದರೆ ತಾತ್ಕಾಲಿಕ ಸ್ಥಗಿತಗೊಳ್ಳುವುದಕ್ಕಿಂತ ಟೆಂಡರ್ ರದ್ದಾಗಬೇಕೆಂಬುದು ನಮ್ಮ ಬೇಡಿಕೆ ಈ ಹಿನ್ನೆಲೆಯಲ್ಲಿ ನಾನು ಕೆಲ ಶಾಸಕರೊಂದಿಗೆ ಮಾತನಾಡಿದ್ದು ಅಧಿವೇಶನದಲ್ಲಿ ಈ ಕುರಿತು ಪ್ರಶ್ನೆ ಮಾಡಬೇಕು ಹಾಗೂ ಕಾಮಗಾರಿಗೆ ಪರವಾಣಿಗೆ ಹಾಗೂ ಟೆಂಡರ್ ಕುರಿತು ತೆಗೆದುಕೊಂಡ ಕ್ರಮಗಳ ಮಾಹಿತಿ ಪಡೆದುಕೊಳ್ಳಬೇಕು ಮುಂದಿನ ಹೋರಾಟಗಳ ರೂಪುರೇಷೆಗಳನ್ನು ಮಾಡಲಾಗುವುದು ಎಂದ ಅವರು, ಕಾಮಗಾರಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಜಿಲ್ಲಾಧಿಕಾರಿಗಳ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಹಾಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕನ್ನಡ ಮರಾಠಿ ಸೇರಿದಂತೆ ಎಲ್ಲ ಸಂಘಟನೆಗಳ ಮುಖಂಡರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದರು
ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ ಮಾತನಾಡಿ ನೀರು ಪೂರೈಕೆ ಕಾಮಗಾರಿ ತೆಗಿತಗೊಳಿಸಿರುವ ಬಗ್ಗೆ ವಿವಿಧ ತಾಲೂಕುಗಳ ತಹಶೀಲ್ದಾರರಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ಬಂದಿದ್ದು ಇದು ಉತ್ತಮ ಬೆಳವಣಿಗೆಯಾಗಿದೆ 1976ರಲ್ಲಿ ಹಿಡಕಲ್ ಡ್ಯಾಮ್ ನಿರ್ಮಾಣವಾದ ನಂತರ 0.0.1 ಟಿ ಎಂ ಸಿ ನೀರನ್ನು ಮಾತ್ರ ಕೈಗಾರಿಕೆಗಳಿಗೆ ಬಿಡಬೇಕೆಂಬ ಕಾನೂನು ಮಾಡಲಾಗಿತ್ತು ಆದರೆ ನಂತರ 0.06 ಟಿಎಂಸಿ ವರೆಗೂ ಕೈಗಾರಿಕೆಗಳಿಗೆ ನೀರು ಪೂರೈಸಲಾಗಿದೆ ಈಗ ಮತ್ತಷ್ಟು ಬಿಡುವ ಸಂಭವವಿದೆ ಇದೇ ರೀತಿ ಆದರೆ ಬೆಳಗಾವಿ ನಗರ ಹಾಗೂ ಇನ್ನಿತರ ಪ್ರದೇಶಗಳಿಗೆ ತೀವ್ರ ಕುಡಿಯುವ ನೀರಿನ ಅಭಾವ ಉಂಟಾಗಲಿದೆ ಹೀಗಾಗಿ ನೀರು ಪೂರೈಕೆ ನಿಲ್ಲಿಸುವುದೇ ಯೋಗ್ಯ ಒಂದು ಅವರು ತಿಳಿಸಿದರು
ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ದೇಗೌಡ ಮೋದಗಿ ಮಾತನಾಡಿ, ಕೈಗಾರಿಕೆಗಳಿಗೆ ನೀರು ಪೂರೈಕೆ ಕಾಮಗಾರಿ ಕೇವಲ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಆದರೆ ಕಾಮಗಾರಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಸರ್ಕಾರ ನಿರ್ಧಾರ ತೆಗೆದುಕೊಂಡು ನಮ್ಮ ನೀರಿನ ಹಕ್ಕನ್ನು ರಕ್ಷಿಸಬೇಕು ಎಂದರು ಸಂಘಟನೆ ಪದಾಧಿಕಾರಿಗಳು ಇನ್ನಿತರ ಮುಖಂಡರು ಉಪಸ್ಥಿತರಿದ್ದರು