ಬೆಳಗಾವಿಯಲ್ಲೊಂದು ಲವ್- ಕಿಡ್ನಾಪ್ ಪ್ರಕರಣ ತಡವಾಗಿ ಬೆಳಕಿಗೆ.

ಬೆಳಗಾವಿ: ಬೆಳಗಾವಿಯಲ್ಲೊಂದು ಲವ್- ಕಿಡ್ನಾಪ್ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು.ಮುಸ್ಲಿಂ ಹುಡುಗನ ಜೊತೆಗೆ ಮದುವೆಗೆ ಹುಡುಗಿ ತಾಯಿ ವಿರೋಧ ಮಾಡಿದ್ದಾರೆ.
ಪ್ರೀತಿಸಿದ ಹಿಂದೂ ಯುವತಿಯನ್ನೇ ಮುಸ್ಲಿಂ ಹುಡುಗ ಅಪಹರಿಸಿದ ಘಟನೆ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ಘಟನೆ ನಡೆದಿದೆ.
ನರ್ಸಿಂಗ್ ವಿದ್ಯಾರ್ಥಿನಿ ಆಗಿರುವ ರಾಧಿಕಾ ಮುಚ್ಚಂಡಿ (19) ಅಪಹರಣ ಆರೋಪ ತಡವಾಗಿ ಬೆಳಕಿಗೆ ಬಂದಿದೆ. ಗೌಂಡಿ ಆಗಿ ಕೆಲಸ ಮಾಡ್ತಿದ್ದ ಸದ್ರುದಿನ್ ಬೇಪಾರಿ ಎಂಬಾತನ ವಿರುದ್ಧ ರಾಧಿಕಾ ಅಪಹರಣ ಆರೋಪ , ಎರಡ್ಮೂರು ವರ್ಷಗಳಿಂದ ರಾಧಿಕಾ ಹಾಗೂ ಸದ್ರುದಿನ್ ಬೇಪಾರಿ ಮಧ್ಯೆ ಪ್ರೀತಿ ಮುಡಿತ್ತು. ಅನ್ಯ ಧರ್ಮ ಅನ್ನೋ ಕಾರಣಕ್ಕೆ ಮದುವೆಗೆ ರಾಧಿಕಾ ತಾಯಿ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಕಾರಣಕ್ಕೆ 17 ದಿನಗಳ ಹಿಂದೆ ರಾಧಿಕಾ ಅಪಹರಿಸಿ ಕರೆದೊಯ್ದಿರುವ ಸದ್ರುದಿನ್.
ಸದ್ರುದಿನ್‌ಗೆ ಆತನ ಕುಟುಂಬಸ್ಥರು ಸಾಥ್ ಕೊಟ್ಟಿರುವ ಆರೋಪ ಬಂದಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ರಾಧಿಕಾ ತಾಯಿ ದೀಪಾ ಮುಚ್ಚಂಡಿ . ಓಡಿ ಹೋಗಿರುವ ಜೋಡಿ ಪತ್ತೆಗಾಗಿ ಮೂರು ವಿಶೇಷ ತಂಡ ರಚನೆ .ಮಾಧ್ಯಮಗಳಿಗೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾಹಿತಿ ನಿಡಿದ್ದಾರೆ.