ಬೈಲ್ ಹೊಂಗಲ್

ರಸ್ತೆ ಸುರಕ್ಷತಾ ಬಗ್ಗೆ ಜನರಲ್ಲಿ ಅರಿವು ; ಸಿಪಿಐ ರಾಘವೇಂದ್ರ

ಬೈಲಹೊಂಗಲ : ತಾಲೂಕಿನ ನೇಸರ್ಗಿ ರಸ್ತೆ ಪಕ್ಕದಲ್ಲಿ ಇರುವಂತ ನಯರಾ ಪೆಟ್ರೋಲಿಯಂ ಹಾಗೂ ಪೋಲಿಸ್ ಅಧಿಕಾರಿ ಸಿಪಿಐ ರಾಘವೇಂದ್ರ ಹವಾಲ್ದಾರ್ ಸಬಾಗಿತ್ವದಲ್ಲಿ ರಸ್ತೆ ಸುರಕ್ಷತಾ ಮತ್ತು ಜಾಗೃತಿಯ ಬಗ್ಗೆ ಅರಿವು

ಜನರಲ್ಲಿ ರಸ್ತೆ ಜಾಗೃತಿಯ ಮೂಡಿಸಲು ನೇಸರ್ಗಿ ನಯರಾ ಪೆಟ್ರೋಲಿಯಂ ಮಾಲೀಕರಾದ ಬಸವರಾಜ ಯಲ್ಲಪ್ಪ ಗುಜನಟ್ಟಿ ಮತ್ತು ನೇಸರ್ಗಿ ಪೊಲೀಸ್ ಅಧಿಕಾರಿಗಳಾದ ಸಿಪಿಐ ರಾಘವೇಂದ್ರ ಹವಾಲ್ದಾರ್ ಸಭಾಗಿತ್ವದಲ್ಲಿ ಜನರಲ್ಲಿ ರಸ್ತೆ ಸುರಕ್ಷತಾ ಬಗ್ಗೆ ಜನರು ಹೇಗೆ ಜಾಗೃತೆ ವಹಿಸಬೇಕು ಕಾರ್ಯಕ್ರಮ ನಡೆಸಿದ್ದರು

ಇದೇ ಸಂದರ್ಭದಲ್ಲಿ ಮಾತನಾಡಿದಂತ ನೈಸರ್ಗಿಯ ಸಿಪಿಐ ರಾಘವೇಂದ್ರ ಹವಾಲ್ದಾರ್ ಜನರು ರಸ್ತೆ ಮೇಲೆ ಸಂಚರಿಸುವ ಸಂದರ್ಭದಲ್ಲಿ ವಾಹನ ಚಾಲಕರು ಅನುಸರಿಸಬೇಕಾದ ನಿಯಮಗಳನ್ನು ಜನರಿಗೆ ತಿಳಿಸಿಕೊಟ್ಟರು

ದ್ವಿಚಕ್ರ ವಾಹನರು ತಪ್ಪದೇ ಹೆಲ್ಮೆಟ್ ಬಳಸಿ ರಸ್ತೆ ಮೇಲೆ ಸಂಚರಿಸಬೇಕು ಹಾಗೂ ತಪ್ಪದೆ ವಾಹನಗಳ ಇನ್ಸೂರೆನ್ಸ್ ತುಂಬಿರಬೇಕು .ವಾಹನಗಳ ಹೆಚ್ಚಳದೊಂದಿಗೆ ಭಾರತದಲ್ಲಿ ಅಪಘಾತಗಳ ಪ್ರಮಾಣ ಕೂಡಾ ನಿರಂತವಾಗಿ ಹೆಚ್ಚಳವಾಗುತ್ತಿದ್ದು, ಅಪಘಾತಗಳಲ್ಲಿ ಸಾವಿನ ಸಂಖ್ಯೆ ಕೂಡಾ ಕಳೆದ ಕೆಲ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿದೆ

ತಪ್ಪದೇ ವಾಹನ ಸವಾರರು ಚೀಟ್ ಬೆಲ್ಟ್ ಧರಿಸಿ ರಸ್ತೆಯ ನಿಯಮಗಳನ್ನು ಪಾಲಿಸಿ ವಾಹನಗಳನ್ನು ಚಲಾವಣೆ ಮಾಡಬೇಕು ಎಂದು ತಿಳಿಸಿ ಕೊಟ್ಟರು. ಸಿಪಿಐ ರಾಘವೇಂದ್ರ ಹವಾಲ್ದಾರ್ ತಾವೇ ಸ್ವತಃ ಬಂದಂತ ಬೈಕುಗಳಿಗೆ ರೆಫ್ಲೆಕ್ಟರ್ ಅಂಟಿಸುವ ಮೂಲಕ ಜನರಲ್ಲಿ ಅರಿವು ಮೂಡಿಸಿದರು

 

Related Articles

Leave a Reply

Your email address will not be published. Required fields are marked *

Back to top button