Uncategorized
ಹಿಂದೂ ಕಾರ್ಯಕರ್ತರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂಗಳಿಗೆ ನೀಡುತ್ತಿರುವ ಕಿರುಕುಳ ಹಾಗೂ ರಾಜ್ಯದ ಹಿಂದೂ ಸಂಘಟಕರಿಗೆ ಕೊಡುತ್ತಿರುವ ಹಿಂಸೆ ಖಂಡಿಸಿ ನಗರದಲ್ಲಿಂದು ಶ್ರೀರಾಮಸೇನೆ, ಭಜರಂಗದಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಭಯ ಮುಕ್ತಗೊಳಿಸಲು ನಿಷೇಧಿತ ಪಿಎಫ್ಐ ಕಾರ್ಯಕರ್ತರನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು, ಎಸ್.ಡಿ.ಪಿ.ಐ ಮೂಲಯ ಭಯ ಬೆದರಿಕೆಯ ಭಾಷಣಗಳ ಮೇಲೆ ನಿಗಾ ಇಟ್ಟು ಕ್ರಮ ತೆಗೆದುಕೊಳ್ಳಬೇಕು, ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮತ್ತು ಅಮಾನತ್ ಮಾಡಿ ಬಲಿಪಶು ಮಾಡುವುದನ್ನು ನಿಲ್ಲಿಸಿ, ಅವರಿಗೆ ಒತ್ತಡ ಗಾಕದೇ ಮುಕ್ತ ಅವಕಾಶ ನೀಡಬೇಕು,
ಮುಸ್ಲಿಂ ಬಾಹುಳ್ಯ ಪ್ರದೇಶಗಳಲ್ಲಿ ವಿಶೇಷ ಪೊಲೀಸ್ ಪಡೆ ಹಾಗೂ ಪೊಲೀಸ್ ಕಚೇರಿಯನ್ನು ತೆರೆಯಬೇಕು, ಹಿಂದೂ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕೂಡಲೇ ನಿಲ್ಲಿಸಬೇಕು, ಮುಕ್ತ ವಾತಾವರಣ ನಿರ್ಮಿಸದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಅನಿವಾರ್ಯವಾಗುತ್ತದೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಅವರು ಆಗ್ರಹಿಸಿದರು.