ಶಾಸಕ ಅಭಯ್ ಪಾಟೀಲ್’ರ ಸೈಕಲ್ ಫೇರಿ… ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕರು.

ಬೆಳಗಾವಿ : ಬೆಳಗಾವಿ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರ ಜನರ ಮನೆ ಬಾಗಿಲಿಗೆ ಶಾಸಕರು ಎಂಬ ಅಭಿಯಾನದಡಿ ಹಮ್ಮಿಕೊಂಡ ಸೈಕಲ್ ಫೇರಿಯೂ ವಾರ್ಡ್ ನಂ. 21 ರಲ್ಲಿ ಸಂಚರಿಸಿ ಜನರ ಸಮಸ್ಯೆಗಳನ್ನು ಆಲಿಸಿತು.
ಜನರ ಮನೆ ಬಾಗಿಲಿಗೆ ಶಾಸಕರು ಎಂಬ ಅಭಿಯಾನದ ಮೂಲಕ ಶಾಸಕ ಅಭಯ್ ಪಾಟೀಲ್ ಅವರು ಸೈಕಲ್ ಸವಾರಿಯ ಮೂಲಕ ವಾರ್ಡ್ ಸಂಖ್ಯೆ 21 ರ ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸಿದರು. ಸಂಬಂಧಪಟ್ಟ ಅಧಿಕಾರಿಗಳು ಮತ್ತು ನಗರಸೇವಕರಾದ ಪ್ರೀತಿ ಕಾಮಕರ ಅವರಿಗೆ ಜನರ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುವಂತೆ ಸೂಚನೆ ನೀಡಿದರು.
ಈ ಸೈಕಲ್ ಫೇರಿಯೂ ವರ್ಧಪ್ಪಾ ಗಲ್ಲಿ, ಉಪ್ಪಾರ ಗಲ್ಲಿ, ಧೋರ್ ಗಲ್ಲಿ ಓಲ್ಡ್ ಪಿಬಿ ರಸ್ತೆ, ಶೃಂಗಾರಿ ಕಾಲೋನಿ, ಬಡಿವಾಲೆ ಕಾಲೋನಿ, ಟೀಚರ್ಸ್ ಕಾಲೋನಿ, ನಾಗೇಂದ್ರ ಕಾಲೋನಿ, ಪಾಟೀಲ್ ಗಲ್ಲಿ ಲಿಂಗಾಯತ ಸ್ಮಶಾನ, ಮಾರುತಿ ಮಂದಿರ ಇನ್ನುಳಿದ ಕಡೆ ಸಂಚರಿಸಿತು.
ಈ ವೇಳೆ ಜಯಂತ್ ಜಾಧವ್, ಸಮಾಜ ಸೇವಕ ವಿನಾಯಕ್ ಕಾಮಕರ್, ಸತೀಶ್ ಪಾಟೀಲ್, ಸಂತೋಷ್ ಶೃಂಗಾರಿ, ವಿಶ್ವನಾಥ್ ಯೆಲೂರ್ಕರ್, ಸೂರ್ಯಕಾಂತ್ ಹಿಂಡಲಗೇಕರ್, ಅರವಿಂದ್ ಗುಂಜಿಕರ್, ಆನಂದ್ ಉಪ್ರಿ, ಪ್ರಕಾಶ್ ಶ್ರೇಯಕರ, ತುಕಾರಾಮ್ ಶಿಂಧೆ, ಬಾಲು ಮಿರಾಶಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.