ಮೈಕ್ರೋ ಫೈನಾನ್ಸ್ ಕಿರುಕುಳ ಗಂಡನನ್ನು ತೊರೆದು ತವರು ಸೇರಿದ ಮಡದಿ..!

ಬಾಗಲಕೋಟೆ: ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಪತ್ನಿಯೋರ್ವಳು ಗಂಡನನ್ನು ಬಿಟ್ಟು ತವರು ಸೇರಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ತಮಿನಾಳ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ತಮಿನಾಳ ಗ್ರಾಮದ ವೀರಣ್ಣ ಬಸಯ್ಯ ಹಾಲಬಾವಿ ಸುಮಾರು ನಾಲ್ಕು ಗುಂಪುಗಳಲ್ಲಿ ಸುಮಾರು 2 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದ. ಕಂತು ತುಂಬಲು ಕಿರುಕುಳ ನೀಡಿದ ಹಿನ್ನೆಲೆ ವೀರಣ್ಣನ ಪತ್ನಿ ತವರು ಸೇರಿದ್ದಾಳೆ. ಇತ್ತ ಒಂದುವರೆ ತಿಂಗಳಿನಿಂದ ಮನೆಯಲ್ಲಿ ಹೆಂಡತಿ ಇಲ್ಲದೆ ಕಂಗಾಲಾದ ವೀರಣ್ಣ ಮಾನಸೀಕವಾಗಿ ಕಿರುಕುಳಕ್ಕೊಳಗಾಗಿ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಕೂಡ ಒಳಗಾಗಿದ್ದಾನೆ.
ಇನ್ನು ಮೈಕ್ರೋ ಫೈನಾನ್ಸನವರ ಕಿರುಕುಳಕ್ಕೆ ಒಂದೇ ಗ್ರಾಮದ ಹತ್ತಾರು ಜನ ಊರು ತೊರೆದಿದ್ದಾರೆ. ಒಂದೇ ಗ್ರಾಮದಲ್ಲಿ 30 ಲಕ್ಷಕ್ಕೂ ಅಧಿಕ ಸಾಲವನ್ನು ಮೈಕ್ರೋಫೈನಾನ್ಸನವರು ನೀಡಿದ್ದಾರೆ. ಸಲ ಕಟ್ಟಲಾಗದೆ ಗ್ರಾಮಸ್ಥರು ಊರು ಬಿಟ್ಟು ಹೋಗಿದ್ದು, ಹಲವಾರು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ.