ಬಾಗಲಕೋಟೆ
ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದ ನಗರಸಭೆ ಅಧಿಕಾರಿ.

ಬಾಗಲಕೋಟೆ: ಲಂಚ ಪಡೆಯುವಾಗ ಸಿಕ್ಕಿಬಿದ್ದ ನಗರಸಭೆ ಕಂದಾಯ
ಅಧಿಕಾರಿ ದಾಖಲೆ ನೀಡಲು 5 ಸಾವಿರ ಲಂಚ ಕೇಳಿದ್ದ ಬಿ.ಪಿ ನಿರುಗ್ಗಿ
ಸಾರ್ವಜನಿಕ ದೂರಿನ ಮೇರೆಗೆ ದಾಳಿ ಬಾಗಲಕೋಟೆ ನಗರಸಭೆಯ ಕಂದಾಯ ಅಧಿಕಾರಿ
ವ್ಯಕ್ತಿಯೊಬ್ಬರಿಗೆ ದಾಖಲೆ ನೀಡಲು ಲಂಚ ಪಡೆಯುತ್ತಿರುವಾಗ ಬಾಗಲಕೋಟೆ ನಗರಸಭೆಯ ಕಂದಾಯ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ .
ಬಾಗಲಕೋಟೆ ನವನಗರದ ನಗರಸಭೆಯ ಕಂದಾಯ ಅಧಿಕಾರಿ ಬಿ.ಪಿ ನಿರುಗ್ಗಿ ವ್ಯಕ್ತಿಯೊಬ್ಬರಿಗೆ ದಾಖಲಾತಿಯೊಂದನ್ನು ನೀಡಲು 5 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ದಾಳಿಯಾಗಿ ಸಿಕ್ಕಿಹಾಕಿಕೊಂಡಿದ್ದಾರೆ.ಈ ಕುರಿತು ಈ ಅಧಿಕಾರಿಯ ಬಗ್ಗೆ ಸಾರ್ವಜನಿಕರು ಸಹ ಮೊದಲೇ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ