ಮದಿಹಳ್ಳಿ ಗ್ರಾಮದ ಲಕ್ಷ್ಮೀದೇವಿ ಜಾತ್ರಾ ನಿಮಿತ್ಯ ಪೂರ್ವ ಸಭೆ.

ಹುಕ್ಕೇರಿ: ತಾಲೂಕ ವರದಿ ಸಂತೋಷ ಪಾಟೀಲ ಮದಿಹಳ್ಳಿಯ ಗ್ರಾಮ ದೇವತೆಯಾದ ಶ್ರೀ ಲಕ್ಷ್ಮಿ ದೇವಿಯ ಜಾತ್ರೆಯ ದಿನಾಂಕ 10/11/12 ನಡೆಯಲಿದ್ದು ಸದರಿ ಜಾತ್ರೆಯ ಪೂರ್ವಭಾವಿ ಸಭೆಯನ್ನು ಕರೆಮ್ಯಾ ದೇವಿಯ ದೇವಸ್ಥಾನದ ಆವರಣದಲ್ಲಿ ದಿನಾಂಕ 09/3/2025 ರಂದು ಗ್ರಾಮದ ಹಿರಿಯರು ಸಮ್ಮುಖದಲ್ಲಿ ನಡೆಸಲಾಯಿತು. ಇಂದಿನ ಸಭೆಯಲ್ಲಿ ದೇವಿಯ ಪಲ್ಲಕ್ಕಿಯನ್ನು ಆರತಿ ಅಂದಿಗೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಕುಡಿಸುವುದು ಆರತಿಗಳನ್ನು ಅಲ್ಲಿಯವರೆಗೆ ತೆಗೆದುಕೊಂಡು ಬರುವುದು ಕಮಿಟಿ ನಿರ್ಣಯವು.
ಜಾತ್ರಾ ನಿಮಿತವಾಗಿ ಯಾವುದೇ ಕೆಟ್ಟ ಘಟನೆಗಳು ನಡೆಯದ ಹಾಗೆ ನೋಡಿಕೊಂಡು ಹೋಗಲು 40 ಜನರ ತಂಡ ನಿರ್ಮಿಸುವುದು ಗ್ರಾಮದ ಹಿರಿಯರು ಹೇಳೋ ಮಾತನ್ನು ಯಾರು ಮಿರತಕ್ಕದಲು ಎರಡು ದಿನಗಳ ಅಂಬಲಿಗಾಡಿಗಳ ಮೆರವಣಿಗೆಯನ್ನು ವಾದ್ಯ ಮೇಳ ಹಾಗೂ ಅಂಬ್ಲಿ ಕೊಡ ಹೊತ್ತು ಸುಮಂಗಲೆಯರೂಂದಿಗೆ ಶನಿವಾರ 12.03.2025ದನ್ನು ಸಾಯಂಕಾಲ 8:00ಗೆ ಆರತಿ ಕಾರ್ಯಕ್ರಮ ಹಾಗೂ ಮೆರವಣಿಗೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಎತ್ತಿನಗಾಡಿಶರತ್ತು ವಿವಿಧ ಸ್ಪರ್ಧೆಗಳು ಇರುತ್ತವೆ. ಯಾರು ತಂಟೆ ತಕಾರ ಮಾಡದೆ ನಮ್ಮೂರಿನ ಜಾತ್ರೆಯನ್ನು ಅತಿ ವಿಭಜನೆಯಿಂದ ನಡೆಸಿಕೊಡಬೇಕು ಎಂದು ಈ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.
ಇವತ್ತಿನ ದಿವಸ ಈ ಸಭೆಯಲ್ಲಿ ಗೋಪಾಲ್ ಬಾಗಿ ಸದಾನಂದ ಬಾಗಿ ರಾಮಚಂದ್ರ ಬನ್ನನವರ ಬಸವರಾಜ ಬಾಗಿ ಅಂಬರೀಶ್ ಬನ್ನಕಗೋಳ ಶಿವಾನಂದ್ ಜಿನರಾಳಿ ಕಾಡಪ್ಪ ಹೋಸಮನಿ ಮಲ್ಲಿಕಾರ್ಜುನ ಗೋಟುರಿ ಗಣಪತಿ ವಾಳಿಕಿ ಸಂಜು ಗಾಯಕವಾಡ ಸಂತೋಷ ಪಾಟೀಲ ಬಾಳಪ್ಪ ಬನ್ನಕಗೋಳ ರಾಜು ಪವರ ಶಂಕರ್ ಬಾಗಿ ಕೆಂಪಣ್ಣ ಕುರುಬೇಟಿ ಸಂಜು ಬನ್ನಕಗೋಳ ಬಾಳಪ್ಪ ಗ್ಯಾನಪ್ಪ ಬಾಗಿ ಶಿವಪ್ಪ ಮುತ್ತಗಿ ಊರಿನ ಗುರುಹಿರಿಯರು ಯುವಕ ಮಿತ್ರರು ಉಪಸಿದ್ದರು.